ರಬಕವಿ-ಬನಹಟ್ಟಿ: ಅಲ್ಲಮಪ್ರಭುದೇವರ ನೂತನ ದೇವಸ್ಥಾನ ಲೋಕಾರ್ಪಣೆ ಹಿನ್ನೆಲೆ ದೇವಸ್ಥಾನ ಆವರಣದಲ್ಲಿ ಇದೇ ಮೊದಲ ಬಾರಿಗೆ ನಾಡಿನ ವಿವಿಧ ಮಠಗಳ 111 ಮಠಾಧೀಶ ಮಹಾತ್ಮರ ಸಾಮೂಹಿಕ ಪಾದಪೂಜೆ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ನಾಡಿನ ನೂರಾರು ಸದ್ಭಕ್ತರು ಕುಟುಂಬ ಸಮೇತವಾಗಿ ಆಗಮಿಸಿ, ಶೃದ್ದಾ ಭಕ್ತಿಯಿಂದ ಪೂಜೆಯನ್ನು ನೆರವೇರಿಸಿದರು.
ಶ್ರೀಗಳ ಪಾದಪೂಜೆ ಸಂದರ್ಭದಲ್ಲಿ ವೇದ ಘೋಷ, ರುದ್ರ ಹಾಗೂ ಮಂಗಳಾಚರಣೆಗಳನ್ನು ಸಾಮೂಹಿಕವಾಗಿ ಮೊಳಗಿದವು. ಶ್ರೀಗಳಿಗೆ ಸದ್ಭಕ್ತರು ರುದ್ರಾಕ್ಷಿ ಸಸಿಗಳನ್ನು ನೀಡುವ ಮೂಲಕ ಹೊಸತನಕ್ಕೆ ಸಾಕ್ಷಿಯಾದರು.
ಹಂದಿಗುಂದದ ಶಿವಾನಂದ ಶ್ರೀ, ಶೇಗುಣಸಿಯ ಡಾ. ಮಹಾಂತಪ್ರಭು ಶ್ರೀ, ಚಿಮ್ಮಡದ ಪ್ರಭು ಶ್ರೀ, ಸ್ಥಳೀಯ ಹಿರೇಮಠದ ಗಂಗಾಧರ ದೇವರು, ಜಮಖಂಡಿ ಮುತ್ತಿನಕಂತಿನಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ, ಬನಹಟ್ಟಿಯ ಶರಣಬಸವ ಶಿವಾಚಾರ್ಯ, ರಬಕವಿ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀ, ತೆಲಸಂಗದ ವಿರೇಶದೇವರು, ವಿಜಯಪೂರದ ಸಿದ್ದಲಿಂಗಸ್ವಾಮೀಜಿ, ಜಂಬಗಿ ಅಡವಿಸಿದ್ದೇಶ್ವರ ಶಿವಾಚಾರ್ಯ, ಯಾತಗೇರಿ ಜಿಲ್ಲೆಯ ವಿಶ್ವಾರಾಧ್ಯ ಮಠದ ಶ್ರೀ, ಬಂಡಿಗಣಿಯ ಅನ್ನದಾನೇಶ್ವರ ಬಸವಗೋಪಾಲ ಶ್ರೀ, ಮರೆಗುದ್ದಿ ಸಿದ್ದರಾಮ ಶ್ರೀ, ವಿರುಪಾಕ್ಷ ದೇವರು, ಮಹಾವೀರ ಪ್ರಭು ಸೇರಿದಂತೆ ವಿವಿಧ ಮಠಾಧೀಶರು ಇದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.
ವಚನೋತ್ಸವ- ಐದು ಸಾವಿರದಷ್ಟು ವಚನ ಗ್ರಂಥ ಮೆರವಣಿಗೆಯಲ್ಲಿ ಸಾವಿರಾರು ಶರಣ, ಶರಣೆಯರು ಭಾಗಿಯಾದರು. ಕುದುರೆ, ಒಂಟೆ, ಆನೆ ಅಂಬಾರಿಯಲ್ಲಿ ಕಳಸ ಮೆರವಣಿಗೆಯು ಗೊಂಬೆ ಕುಣಿತ, ವಿವಿಧ ವಾದ್ಯಗಳೊಂದಿಗೆ ಜರುಗಿತು.
Kshetra Samachara
11/11/2024 06:37 am