ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಕೈಮಗ್ಗ ನೇಕಾರರಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭ

ರಬಕವಿ-ಬನಹಟ್ಟಿ:ಬನಹಟ್ಟಿ ನಗರದ ಕೆಎಚ್.ಡಿಸಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಕೈಮಗ್ಗ ನೇಕಾರರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಬುಧವಾರ ನವೆಂಬರ್ 20 ರಂದು ಬೆಳಿಗ್ಗೆ 11 ಗಂಟೆಗೆ ಅನಿರ್ದಿಷ್ಟಾವಧಿ ಹೋರಾಟವನ್ನು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಹಾಗೂ ಕೆಎಚ್‌ಡಿಸಿ ನೇಕಾರರ ಸಂಯುಕ್ತಾಶ್ರಯದಲ್ಲಿ ಪ್ರಾರಂಭಿಸಲಾಯಿತು. ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯಿಸಿ, ನಿವೇಶನ ರಹಿತ ನೇಕಾರರಿಗೆ ನಿವೇಶನ, ಸಿಟಿಎಸ್ ಉತಾರ ಹಂಚಿಕೆಯಾಗದೇ ಇರುವುದು, 55 ವರ್ಷ ಮೇಲ್ಪಟ್ಟ ನೇಕಾರರಿಗೆ ಕನಿಷ್ಟ ಐದು ಸಾವಿರ ಮಾಶಾಸನ ಜಾರಿ ಮಾಡಬೇಕು. ನಿಗಮದಲ್ಲಿ ಆಗಿರುವ ನೂರಾರು ಕೋಟಿ ರೂಪಾಯಿಗಳ ಅವ್ಯವಹಾರ ಮರುತನಿಖೆಯಾಗಬೇಕೆಂದು ಒತ್ತಾಯಿಸಿ, ಹುಬ್ಬಳ್ಳಿ ಪಾದಯಾತ್ರೆ, ಧರಣಿ ಸೇರಿದಂತೆ ಹಲವು ಹೋರಾಟ ಮಾಡಿದರು ಕೂಡ ಸರ್ಕಾರದಿಂದ ಉತ್ತರ ಬಾರದೇ ನೇಕಾರರನ್ನು ನಿರ್ಲಕ್ಷ್ಯ ಮಾಡುತ್ತಿರುವ ಸರ್ಕಾರ ಧೋರಣೆ ಖಂಡಿಸಿ, ಪ್ರತಿಭಟನೆ ಪ್ರಾರಂಭಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ನೂರಾರು ನೇಕಾರರು ಭಾಗಿಯಾಗಿ ಘೋಷಣೆ ಕೂಗಿದರು.

Edited By : Ashok M
PublicNext

PublicNext

20/11/2024 07:41 pm

Cinque Terre

33.67 K

Cinque Terre

0