ಮಂಗಳೂರು : ಮಹಾರಾಷ್ಟ್ರ ಚುನಾವಣಾ ನಿಮಿತ್ತ ಸದ್ಯ ಪುಣೆಯಲ್ಲಿರುವ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್‌ರವರನ್ನು ಭೇಟಿಯಾಗಿ ಸ್ಥಗಿತಗೊಂಡಿರುವ ಮಂಗಳೂರು-ಪುಣೆ ನೇರ ವಿಮಾನಯಾನ ಪುನರಾರಂಭಿಸುವಂತೆ ಮನವಿ ಮಾಡಿದರು.
ಮಂಗಳೂರು-ಪುಣೆ ನಡುವೆ ನೇರ ಸಂಬಂಧಗಳಿದ್ದು ದಿನನಿತ್ಯ, ಸಾರ್ವಜನಿಕರು, ಉದ್ಯಮಿಗಳು, ಉದ್ಯೋಗಿಗಳು ಸೇರಿದಂತೆ ಹಲವಾರು ಮಂದಿ ಓಡಾಟ ನಡೆಸುತ್ತಿರುತ್ತಾರೆ. ಆದ್ದರಿಂದ ಈ ಹಿಂದೆ ಇದ್ದ ನೇರ ವಿಮಾನ ಸೇವೆಯಿಂದ ಅನೇಕ ಪ್ರಯಾಣಿಕರಿಗೆ ಪ್ರಯೋಜನವಾಗುತ್ತಿತ್ತು. ಸದ್ಯ ಈ ಸೇವೆ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲತೆ ಉಂಟಾಗಿದೆ. ಈ ಬಗ್ಗೆ ಈ ಹಿಂದೆ ಪುಣೆ ಹಾಗೂ ಮಂಗಳೂರಿನ ಉದ್ಯಮಿಗಳು ಮನವಿ ಸಲ್ಲಿಸಿದ್ದು ಅದರಂತೆ ವಿಶೇಷ ಆದ್ಯತೆಯ ಮೇರೆಗೆ ಮನವಿಯನ್ನು ಪರಿಗಣಿಸಿ ವಿಮಾನಯಾನವನ್ನು ಪುನರ್ ಆರಂಭಿಸುವಂತೆ ಶಾಸಕರು ಮನವಿ ಮಾಡಲಾಗಿ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಹೋಟೆಲ್ ಉದ್ಯಮಿಗಳ ಸಂಘದ ಸಂತೋಷ್ ಶೆಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
08/11/2024 08:51 pm