ಚಿಕ್ಕಮಗಳೂರು : ಶ್ರೀರಾಮ ಸೇನೆ ವತಿಯಿಂದ ದತ್ತ ಮಾಲಾ ಅಭಿಯಾನಕ್ಕೆ ಚಾಲನೆ ದೊರೆತಿದ್ದು ಇದೇ ಶನಿವಾರ ಹಾಗೂ ಭಾನುವಾರ ಚಂದ್ರದ್ರೋಣ ಪರ್ವತ ಶ್ರೇಣಿಯ ದತ್ತಾಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ನವೆಂಬರ್ 10 ಭಾನುವಾರ ರಂದು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ದತ್ತಮಾಲಾಧಾರಿಗಳು ದತ್ತ ಪೀಠಕ್ಕೆ ತೆರಳಿ ದತ್ತ ಪಾದಕೆ ದರ್ಶನ ಪಡೆಯಲಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಗಿರಿ ಪ್ರದೇಶದ ಪ್ರಮುಖ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ಗಾಳಿಕೆರೆ, ಸೀತಾಳಯ್ಯನಗಿರಿ ಮಾಣಿಕ್ಯಧಾರಗಳಿಗೆ ಈ ವಾರಾಂತ್ಯದ ನವೆಂಬರ್ 9 ಶನಿವಾರ ಹಾಗೂ 10 ಭಾನುವಾರದಂದು ದತ್ತಾ ಭಕ್ತರನ್ನು ಹೊರತುಪಡಿಸಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
Kshetra Samachara
05/11/2024 04:22 pm