ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೃಂಗೇರಿ : ರೈತರು ಭಿಕ್ಷಕರಲ್ಲ ನಾಡಿಗೆ ಅನ್ನ ನೀಡುವವರು - ಅಂಬ್ಲೂರು ರಾಮಕೃಷ್ಣ

ಶೃಂಗೇರಿ: ತಾಲೂಕಿನಲ್ಲಿ ಈ ಬಾರಿ ಅತಿ ಹೆಚ್ಚು ಮಳೆಯಾಗಿದ್ದು, ಶೃಂಗೇರಿ ತಾಲೂಕನ್ನು ಅತಿವೃಷ್ಠಿ ಪೀಡಿತ ಪ್ರದೇಶ ಎಂದು ಘೋಷಿಸಿ, ರೈತರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಒತ್ತಾಯಿಸಿದ್ದಾರೆ.

ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಗೆ ವಿವಿಧ ಬೇಡಿಕೆಗಾಗಿ ಮನವಿ ಸಲ್ಲಿಸಿದ ರೈತರು, ಈ ಮೊದಲೇ ರೈತರಿಗೆ ಉಂಟಾದ ಹಾನಿಯ ಬಗ್ಗೆ ಸಮೀಕ್ಷೆ ನಡೆಸುವಂತೆ ಮನವಿ ಮಾಡಿದ್ದರೂ, ಅಧಿಕಾರಿಗಳು ರೈತರ ಜಮೀನಿಗೆ ಪರಿಹಾರ ನೀಡಿಲ್ಲ. ಇನ್ನೂ ಸರಕಾರಕ್ಕೆ ಹಾನಿ ಬಗ್ಗೆ ವರದಿ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ರೈತರು ಭಿಕ್ಷಕರಲ್ಲ. ನಾಡಿನ ಜನರಿಗೆ ಅನ್ನ ನೀಡುತ್ತಿದ್ದರೂ, ರೈತರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Edited By : PublicNext Desk
PublicNext

PublicNext

05/11/2024 03:53 pm

Cinque Terre

7.55 K

Cinque Terre

0

ಸಂಬಂಧಿತ ಸುದ್ದಿ