ಉದ್ಯಾವರ : ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ ಹೊಡೆದು ಪುಣ್ಯಕ್ಷೇತ್ರ ದರ್ಶನಕ್ಕೆ ಹೊರಟಿದ್ದ ಪ್ರವಾಸಿಗರು ಗಾಯಗೊಂಡ ದುರ್ಘಟನೆ ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ.
ಕೊಲ್ಲೂರಿನತ್ತ ತೆರಳುತ್ತಿದ್ದ ಹೊರ ರಾಜ್ಯದ ಟೂರಿಸ್ಟ್ ವಾಹನವು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದ್ದು, ಮಹಿಳೆಯರೂ ಸೇರಿದಂತೆ ಪ್ರವಾಸಿಗರು ಗಂಭೀರ ಗಾಯಗೊಂಡಿದ್ದಾರೆ.
ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಟೂರಿಸ್ಟ್ ವಾಹನ ಜಖಂ ಗೊಂಡಿದೆ.ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
PublicNext
03/11/2024 10:11 am