ವಿಜಯಪುರ: ವಕ್ಫ್ ವಿವಾದ ಎಂಬುದು ವಿಜಯಪುರ ಜಿಲ್ಲೆಯಿಂದಲೇ ಆರಂಭಗೊಂಡಿದೆ. ಕಳೆದ ತಿಂಗಳು ಅಕ್ಟೋಬರ್ 7 ಹಾಗೂ 8 ರಂದು ವಿಜಯಪುರ ಜಿಲ್ಲೆಗೆ ಆಗಮಿಸಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಕ್ಫ್ ಅದಾಲತ್ ನಡೆಸಿ, ವಕ್ಫ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ 45 ದಿನಗಳಲ್ಲಿ ಪ್ಲ್ಯಾಗಿಂಗ್ ಮಾಡುವಂತೆ ಸೂಚಿಸಿದ್ದರು. ಇದರನ್ವಯ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿದ ಬೆನ್ನಲ್ಲೆ ವಕ್ಫ್ ವಿವಾದದ ಕಿಡಿ ಹೊತ್ತುಕೊಂಡಿತ್ತು. ಇದರ ಬೆನ್ನಲ್ಲೇ ರೈತರು ಧರಣಿ ಸತ್ಯಾಗ್ರಹ ಆರಂಭಿಸಿದ ಬೆನ್ನಲ್ಲೇ ಸರ್ಕಾರ ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆಯಿತು ಜೊತೆಗೆ ಕೆಲ ರೈತರ ಆರ್ ಟಿ ಸಿಯಲ್ಲಿ ವಕ್ಫ್ ಎಂದು ಸೇರ್ಪಡೆ ಮಾಡಿದ್ದನ್ನು ತಗೆದಿರುವ ಹಿನ್ನಲೆಯಲ್ಲಿ ರೈತರು ಹೋರಾಟ ಕೈ ಬಿಟ್ಟರು.
ಇನ್ನೂ ಇದೇ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಧಾನಿಗೆ ಪತ್ರ ಬರೆದಿದ್ದಾರೆ. ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣ ಮಾಡುವಂತೆ ಆಗ್ರಹಿಸಿದ್ದಾರೆ.
ಸದ್ಯ ವಕ್ಫ್ ವಿವಾದ ಪ್ರಧಾನ ಮಂತ್ರಿ ಕಚೇರಿ ತಲುಪಿದ್ದು, ಯಾವ ಹಂತಕ್ಕೆ ತಲುಪುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.
ಮಂಜು ಕಲಾಲ , ಪಬ್ಲಿಕ್ ನೆಕ್ಸ್ಟ ವಿಜಯಪುರ
PublicNext
02/11/2024 01:22 pm