ವಿಜಯಪುರ: ಕೆಪಿಎಸ್‌ಸಿಯ ಗೆಜೆಟೆಡ್ ಪ್ರೊಬೇಷನರಿ ಮರು ಪರೀಕ್ಷೆಯಲ್ಲೂ ಎಡವಟ್ಟು ನಡೆದ ಆರೋಪ ಕೇಳಿ ಬಂದಿದೆ. ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಅಭ್ಯರ್ಥಿಗಳ ನೊಂದಣಿ ಸಂಖ್ಯೆ ಅದಲು ಬದಲು ಆಗಿರುವ ಘಟನೆ ವಿಜಯಪುರ ನಗರದ ಸಿಕ್ಯಾಬ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಪರೀಕ್ಷಾ ಕೇಂದ್ರದ ಕೊಠಡಿಯಿಂದ ಹೊರಗೆ ಬಂದ ಅಭ್ಯರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ರು ಕೆಪಿಎಸ್ಸಿಯಿಂದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆ ಇವತ್ತು ನಡೆದಿತ್ತು. ಆಗಸ್ಟ್ 27 ರಂದು ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಲೋಪ ಹಿನ್ನೆಲೆ ಮರು ಪರೀಕ್ಷೆ ನಿಗದಿ ಮಾಡಿ ನಡೆಸಲಾಗಿತ್ತು. ಆದ್ರೆ ವಿಜಯಪುರ ನಗರದ ಹಲವೆಡೆ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ನೊಂದಣಿ ಸಂಖ್ಯೆ ಅದಲು ಬದಲು ಆಗಿದ್ದು ಸಿಕ್ಯಾಬ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಜಿಪಂ ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರು ಭೇಟ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
29/12/2024 02:31 pm