ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಯಲ್ಲಮ್ಮನ ದೇವಸ್ಥಾನದಲ್ಲಿ ಏಜೆಂಟರ ಹಾವಳಿ

ಬೆಳಗಾವಿ: ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಡಿಸಿಗೆ ಇಂದು ಮನವಿ ಸಲ್ಲಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿರುವ ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಬರುವ ಭಕ್ತರು ನಾನಾ ರಾಜ್ಯಗಳಿಂದ ಆಗಮಿಸುತ್ತಾರೆ. ದೇವಸ್ಥಾನದಲ್ಲಿ ಒಬ್ಬರಿಗೆ ಸ್ಪೆಷಲ್ ಅಂತಾ ಟಿಕೆಟ್ ದರವು ರೂ.500 ಮತ್ತು ರೂ.100 ರಂತೆ ಎರಡು ಕೌಂಟರ್ ಮಾಡಿ ಭಕ್ತರಿಗೆ ಟಿಕೆಟನ್ನು ನೀಡುತ್ತಿದ್ದಾರೆ. ಇದನ್ನು ಸರಿಯಾಗಿ ನೋಡಿಕೊಳ್ಳದೆ ಅವರಿಗೆ ಹೇಗೆ ಬೇಕೋ ಹಾಗೆ ಭಕ್ತರನ್ನು ನಡೆಸಿಕೊಳ್ಳುತ್ತಿದ್ದಾರೆ.

ರೂ.100 ಟಿಕೆಟನ್ನು ಬೆಳಗ್ಗೆ 11 ಗಂಟೆಗೆ ಪಡೆದರೂ ಸಾಯಂಕಾಲ 4 ಗಂಟೆಯಾದರೂ ದೇವರ ದರ್ಶನ ಆಗುತ್ತಿಲ್ಲ. ಏಜೆಂಟರು ಅಲ್ಲಿನ ಅಧಿಕಾರಿಗಳ ಜೊತೆಗೂಡಿ ಭಕ್ತರಿಗೆ ನಿಮಗೆ ಕೇವಲ 5 ನಿಮಿಷದಲ್ಲಿ ದರ್ಶನ ಮಾಡಿಸುತ್ತೇವೆಂದು ಹೇಳಿ ಒಬ್ಬರಿಗೆ ರೂ.1000 ಮತ್ತು ರೂ.500 ರಂತೆ ಹಣ ಪಡೆದು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ.ಅಲ್ಲಿರುವ ಅಧಿಕಾರಿಗಳನ್ನು ಮತ್ತು ಆಡಳಿತಾಧಿಕಾರಿಯನ್ನು ತಕ್ಷಣ ಎಲ್ಲರನ್ನು ಬೇರೆ ಕಡೆ ವರ್ಗಾವಣೆ ಮಾಡಿ ಬೇರೆ ಅಧಿಕಾರಿಗಳನ್ನು ನೇಮಿಸಿ ಗುಡ್ಡಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

Edited By : Vinayak Patil
PublicNext

PublicNext

22/10/2024 06:57 pm

Cinque Terre

12.11 K

Cinque Terre

3

ಸಂಬಂಧಿತ ಸುದ್ದಿ