ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ:ಕಾಯರ್ತೋಡಿ ಪರಿಸರದಲ್ಲಿ ಬೀಡುಬಿಟ್ಟ ಕಾಡಾನೆಗಳು-ಅಪಾರ ಕೃಷಿ ನಾಶ

ಸುಳ್ಯ ಎರಡು ಮೂರು ದಿನಗಳಿಂದ ಸುಳ್ಯ ನಗರದ ಸಮೀಪದ ಕಾಯರ್ತೋಡಿ ಪರಿಸರದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಪ್ರತಿನಿತ್ಯ ರಾತ್ರಿ ಪರಿಸರದ ಕೃಷಿಕರ ತೋಟಕ್ಕೆ ನುಗ್ಗಿ ಕೃಷಿ ನಾಶ ಮಾಡುತ್ತಿವೆ.

ಹಗಲು ಹೊತ್ತಿನಲ್ಲಿ ಸಮೀಪದ ಪೂಮಲೆ ಕಾಡಿನಲ್ಲಿ ಇರುವ ಆನೆಗಳು ರಾತ್ರಿ ವೇಳೆ ಕೃಷಿಕರ ತೋಟಕ್ಕೆ ಬಂದು ಕೃಷಿ ಹಾನಿ ನಡೆಸುತ್ತಿದೆ. ರವಿವಾರ ರಾತ್ರಿ ವಿಜಯ ಪಡ್ಪು ರವರ ತೋಟಕ್ಕೆ ನುಗ್ಗಿ ತೆಂಗಿನ ಗಿಡ ಮತ್ತು ಬಾಳೆ ಕೃಷಿ ನಾಶಪಡಿಸಿದೆ.

ಈ ಭಾಗದಲ್ಲಿ ಹಳದಿ ರೋಗದಿಂದ ಕಂಗೆಟ್ಟಿರುವ ಕೃಷಿಕರು ಅಲ್ಪಸ್ವಲ್ಪ ಬಾಳೆ, ಅಡಿಕೆ, ತೆಂಗು ಇನ್ನಿತರ ಗಿಡಗಳನ್ನು ನೆಟ್ಟು ಆ ಜೀವನ ನಡೆಸುತ್ತಿದ್ದು, ಅದನ್ನು ನಿರಂತರ ಕಾಡಾನೆಗಳು ಬಂದು ನಾಶಪಡಿಸುತ್ತಿದೆ. ಕಾಡಾನೆಗಳ ನಿರಂತರ ದಾಳಿಯ ಬಗ್ಗೆ ಅರಣ್ಯಇಲಾಖೆ ನಿರ್ಲಕ್ಷ್ಯ ತೋರಿದ್ದು, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಕೃಷಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

22/10/2024 01:08 pm

Cinque Terre

180

Cinque Terre

0

ಸಂಬಂಧಿತ ಸುದ್ದಿ