ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ದೇವರಲ್ಲಿ ಪ್ರಾರ್ಥಿಸಿದ್ದೆ' - ಸಿಜೆಐ ಚಂದ್ರಚೂಡ್

ಮುಂಬೈ: 2019ರಲ್ಲಿ ರಾಮ ಜನ್ಮಭೂಮಿ – ಬಾಬರಿ ಮಸೀದಿ ವಿವಾದದ ಇತ್ಯರ್ಥಕ್ಕೆ ದಾರಿ ತೋರಿಸುವಂತೆ ದೇವರಲ್ಲಿ ಬೇಡಿಕೊಂಡಿದ್ದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಬಹಿರಂಗಪಡಿಸಿದ್ದಾರೆ.

ಸಿಜೆಐ ಚಂದ್ರಚೂಡ್ ಅವರು ತಮ್ಮ ಹುಟ್ಟೂರಾದ ಮಹಾರಾಷ್ಟ್ರದ ಖೇಡ್ ತಾಲೂಕಿನ ಕನ್ಹರ್ಸರ್ ಗ್ರಾಮದಲ್ಲಿ ಮಾತನಾಡಿ, 'ಕೆಲ ಅಪರೂಪದ ಪ್ರಕರಣಗಳಲ್ಲಿ ನಾವು ಪರಿಹಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಮೂರು ತಿಂಗಳ ಕಾಲ ನಮ್ಮ ಪೀಠದ ಮುಂದೆ ಇದ್ದಾಗ ಇದೇ ರೀತಿಯ ಘಟನೆ ಸಂಭವಿಸಿದೆ. ನಾನು ದೇವರ ಮುಂದೆ ಕುಳಿತುಕೊಂಡೆ ಮತ್ತು ದೇವರೇ ಪರಿಹಾರ ನೀಡಬೇಕು ಎಂದು ಕೇಳಿಕೊಂಡಿದ್ದೆ. ನನ್ನನ್ನು ನಂಬಿರಿ, ನಿಮಗೆ ನಂಬಿಕೆ ಇದ್ದರೆ, ದೇವರು ಯಾವಾಗಲೂ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾನೆ" ಎಂದು ಹೇಳಿದರು.

2019ರ ನವೆಂಬರ್ 9 ರಂದು ಅಂತಿಮ ತೀರ್ಪು ನೀಡಿದ್ದ ಐವರು ನ್ಯಾಯಮೂರ್ತಿಗಳಲ್ಲಿ ಡಿ.ವೈ.ಚಂದ್ರಚೂಢ ಕೂಡ ಒಬ್ಬರು. ಚಂದ್ರಚೂಡ್ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಈ ವರ್ಷದ ಜುಲೈನಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

Edited By : Vijay Kumar
PublicNext

PublicNext

21/10/2024 08:59 pm

Cinque Terre

21.24 K

Cinque Terre

6

ಸಂಬಂಧಿತ ಸುದ್ದಿ