ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 545 ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ರಾಜ್ಯ ಪೊಲೀಸ್ ಇಲಾಖೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ನಡೆದಿದ್ದ 545 ಮಂದಿ ಪೊಲೀಸ್ ಸಬ್ ಇನ್ ಸ್ಫೆಕ್ಟರ್ (ಪಿಎಸ್ಐ) ತಾತ್ಕಾಲಿಕ ಆಯ್ಕೆ ಪಟ್ಟಿಯನ್ನ ರಾಜ್ಯ ಪೊಲೀಸ್ ಇಲಾಖೆ ಪ್ರಕಟಿಸಿದೆ.

2021ರ ಗೃಹ ಇಲಾಖೆಯ ಸುತ್ತೋಲೆ ಮೇರೆಗೆ ಕೆಇಎ ಕಳೆದ ಜನವರಿ 23ರಂದು ಪರೀಕ್ಷೆ ನಡೆದಿತ್ತು. ಕಳೆದ 10 ತಿಂಗಳ ಹಿಂದೆ ಪರೀಕ್ಷೆ ನಡೆದಿದ್ದರೂ ಆಯ್ಕೆಪಟ್ಟಿ ಬಿಡುಗಡೆ ಮಾಡುವಲ್ಲಿ ಸರ್ಕಾರ ವಿಳಂಬ ಧೋರಣೆ ತೋರಿದೆ ಎಂದು ಆಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಮಧ್ಯೆ ಇಂದು ತಾತ್ಕಾಲಿಕ ನೇಮಕಾತಿ ಪಟ್ಟಿ ಬಿಡುಗಡೆಯಾಗಿದೆ.

545 ಮಂದಿ ಪಿಎಸ್ಐ ನೇರ ನೇಮಕಾತಿ ಕುರಿತಂತೆ 2021ರಲ್ಲಿ ಗೃಹ ಇಲಾಖೆಯು ಅಧಿಸೂಚನೆ ಹೊರಡಿಸಿತ್ತು. ಇದರಂತೆ 2022ರ ನ.3ರಂದು ಪರೀಕ್ಷೆ ನಡೆದಿತ್ತು. ನೇಮಕಾತಿಯಲ್ಲಿ ಅಕ್ರಮ ಕಂಡುಬಂದಿದ್ದರಿಂದ ನೇಮಕಾತಿಯಾಗಿದ್ದ 545 ಮಂದಿ ತಾತ್ಕಾಲಿಕ ಪಟ್ಟಿಯನ್ನ ಸರ್ಕಾರ ರದ್ದುಗೊಳಿಸಿತ್ತು. ಇದನ್ನ ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿ ನ್ಯಾಯಾಲಯವು ಅರ್ಜಿ ವಜಾಗೊಳಿಸಿ ಮರುಪರೀಕ್ಷೆ ನಡೆಸುವಂತೆ ಆದೇಶಿಸಿತ್ತು. ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಸಲುವಾಗಿ ಕೆಇಎ ವಹಿಸಲು ಸರ್ಕಾರವು ನಿರ್ದೇಶಿಸಿತ್ತು. ಇದರಂತೆ ಕಳೆದ ಜ.23ರಂದು 545 ಮಂದಿ ಪಿಎಸ್ಐ ಪರೀಕ್ಷೆ ನಡೆಸಿದ್ದು, ಇದೀಗ ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನ ಪೊಲೀಸ್ ನೇಮಕಾತಿ ವಿಭಾಗವು ಪ್ರಕಟಿಸಿದೆ.

Edited By : Abhishek Kamoji
PublicNext

PublicNext

21/10/2024 05:36 pm

Cinque Terre

16.49 K

Cinque Terre

0

ಸಂಬಂಧಿತ ಸುದ್ದಿ