ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಅ.23ರಂದು ವಿದ್ಯುತ್ ವ್ಯತ್ಯಯ

ಕಾರವಾರ: ತಾಲೂಕಿನ ಶೇಜವಾಡದ 110ಕೆ.ವಿ ವಿದ್ಯುತ್ ಕೇಂದ್ರದ ಶಕ್ತಿ ಪರಿವರ್ತಕದಲ್ಲಿ ನಿರ್ವಹಣೆ ಕಾರ್ಯ ಇರುವುದರಿಂದ ಅ. 23 ರಂದು ವಿದ್ಯುತ್ ವ್ಯತ್ಯಯವಾಗಲಿದೆ.

ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಉಪ ಕೇಂದ್ರದಿಂದ ಹೊರಡುವ 11ಕೆ.ವಿ ಕೆ.ಎಚ್.ಬಿ, ಸುಂಕೇರಿ, ನಂದನಗದ್ದಾ, ತೆಲಂಗ ರಸ್ತೆ, ಶಿರವಾಡ ಮತ್ತು ಇಂಡಸ್ಟ್ರಿಯಲ್ ಫೀಡರ್ ವ್ಯಾಪ್ತಿಯಲ್ಲಿನ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Edited By : Abhishek Kamoji
Kshetra Samachara

Kshetra Samachara

21/10/2024 08:09 pm

Cinque Terre

7.12 K

Cinque Terre

0