ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ ನಂ.66 ರಲ್ಲಿ ಚರಂಡಿ ಗಟಾರ ಬ್ಲಾಕ್ ಆಗಿ ರಸ್ತೆಯುದ್ದಕ್ಕೂ ಹರಿಯುತ್ತಿರುವ ನೀರು..!

ಹುಬ್ಬಳ್ಳಿ: ಚರಂಡಿ ಗಟಾರ ಬ್ಲಾಕ್ ಆಗಿ ರಸ್ತೆಯುದ್ದಕ್ಕೂ ನೀರು ಹರಿಯುತ್ತಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾದ ಘಟನೆ ಹುಬ್ಬಳ್ಳಿಯ ವಾರ್ಡ್ ನಂಬರ್ 66 ರಲ್ಲಿ ಬರುವ, ಪೆಂಡಾರಗಲ್ಲಿ ಮುಖ್ಯ ರಸ್ತೆಯಲ್ಲಿ ಈ ನಡೆದಿದೆ.

ಹೌದು,,, ಈ ಪೆಂಡಾರಗಲ್ಲಿಯಲ್ಲಿ ಸುಮಾರು ಎರಡು ವಾರಗಳಿಂದ ಚರಂಡಿ ನೀರು ರಸ್ತೆ ಮೇಲೆನೇ ಹರಿಯುತ್ತಿದೆ. ಇದಕ್ಕೆ ಮುಖ್ಯ ಕಾರಣವೇ ಚರಂಡಿ ಗಟಾರ ಮುಚ್ಚಿಕೊಂಡಿದ್ದು, ಮಾರ್ಕೆಟ್‌ ಗೆಂದು ಹೋಗಬೇಕಾದ್ರೆ ಇದು ಮುಖ್ಯ ರಸ್ತೆ ಕೂಡ ಹೌದು. ಜನರು ಈ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಹೇಳಿದ್ರೆ ಯಾರು ಕೂಡ ಇತ್ತ ತಿರುಗಿ ನೋಡುತ್ತಿಲ್ಲವಂತೆ. ಕೂಡಲೇ ಸಂಬಂಧಿಸಿದ ಕಾರ್ಪೊರೇಟರ್ ಈ ಸಮಸ್ಯೆಯನ್ನು ಬಗೆ ಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

Edited By : Suman K
Kshetra Samachara

Kshetra Samachara

21/10/2024 12:55 pm

Cinque Terre

7.81 K

Cinque Terre

2

ಸಂಬಂಧಿತ ಸುದ್ದಿ