ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆ - ಉಕ್ಕಿ‌ಹರಿದ ದರ್ಪಣ ‌ತೀರ್ಥ ನದಿ

ಸುಳ್ಯ: ದ.ಕ.ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪರಿಸರ ಹಾಗೂ ಸುತ್ತಮುತ್ತಲು ಭಾರೀ ಮಳೆಯಾಗುತ್ತಿದೆ. ಪರಿಣಾಮ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿಯು ಉಕ್ಕಿ ಹರಿಯುತ್ತಿದೆ.

ದರ್ಪಣ ‌ತೀರ್ಥ ನದಿಯು ಪ್ರವಾಹದ ರೀತಿಯಲ್ಲಿ ಉಕ್ಕಿ‌ಹರಿದ ಪರಿಣಾಮ ಶ್ರೀ ಆದಿಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣಕ್ಕೆ ನೀರು ಪ್ರವೇಶಿಸಿದೆ‌. ಆದಿಸುಬ್ರಹ್ಮಣ್ಯದ ಕೆಲವು ಅಂಗಡಿಮುಂಗಟ್ಟುಗಳಿಗೂ ಮಳೆ ನೀರು ನುಗ್ಗಿದೆ.

Edited By : Shivu K
Kshetra Samachara

Kshetra Samachara

21/10/2024 10:47 am

Cinque Terre

6.94 K

Cinque Terre

0

ಸಂಬಂಧಿತ ಸುದ್ದಿ