ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಜಿಲ್ಲಾಸ್ಪತ್ರೆ ಆವರಣದಲ್ಲೇ ಖಾಸಗಿ ಆಂಬ್ಯುಲೆನ್ಸ್ ಡ್ರೈವರ್ಸ್ ಮಾರಾಮಾರಿ!

ಹಾಸನ: ಆಂಬ್ಯುಲೆನ್ಸ್‌ನಲ್ಲಿ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುವ ವಿಚಾರಕ್ಕೆ ಸಂಬಂಧಿಸಿ ಖಾಸಗಿ ಆಂಬ್ಯುಲೆನ್ಸ್ ಡ್ರೈವರ್‌‌ಗಳ ನಡುವೆ ಮಾರಾಮಾರಿ ಹಾಸನದ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದಿದೆ.

ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಈ ವೇಳೆ ಆಸ್ಪತ್ರೆ ಆವರಣಕ್ಕೆ ಬಂದ ಎರಡು ಆಂಬ್ಯುಲೆನ್ಸ್‌ಗಳು ರೋಗಿಯನ್ನು ಕರೆದೊಯ್ಯುವ ವಿಚಾರಕ್ಕೆ ಎರಡು ಆಂಬ್ಯುಲೆನ್ಸ್ ಚಾಲಕರ ನಡುವೆ ಜಗಳ ಶುರುವಾಗಿದೆ.

ಪರಸ್ಪರ ರಕ್ತ ಬರುವಂತೆ ಡ್ರೈವರ್‌ಗಳು ಹೊಡೆದಾಡಿಕೊಂಡಿದ್ದು, ಓರ್ವ ಚಾಲಕನಿಗೆ ಒಂದು ಡ್ರೈವರ್ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಕಲ್ಲು, ಸ್ಕ್ರೂಡೈವರ್‌ಗಳಿಂದ ಓರ್ವ ಚಾಲಕ ಹಲ್ಲೆ ನಡೆಸಿದ್ದಾನೆ. ಹೊಡೆದಾಟ ಬಿಡಿಸಲು ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್‌ಗಳು ಹೈರಾಣಾಗಿದ್ದಾರೆ.

Edited By : Shivu K
PublicNext

PublicNext

20/10/2024 06:25 pm

Cinque Terre

48.22 K

Cinque Terre

0

ಸಂಬಂಧಿತ ಸುದ್ದಿ