ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ವಿಧಾನ ಪರಿಷತ್ ಚುನಾವಣೆ ಹಣಾಹಣಿ- ಬ್ರಹ್ಮಾವರ ತಾಲೂಕು ಸರ್ವಸನ್ನದ್ಧ

ಬ್ರಹ್ಮಾವರ: ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಅಕ್ಟೋಬರ್ 21ರಂದು ನಡೆಯುವ ಚುನಾವಣೆಗೆ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆಯವರ ನೇತೃತ್ವದಲ್ಲಿ ಬ್ರಹ್ಮಾವರ ತಾಲೂಕು ಆಡಳಿತ ಸೌಧದಲ್ಲಿ ನಾನಾ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಜೊತೆ ಸಕಲ ಸಿದ್ಧತೆ ನಡೆಸಲಾಗಿದೆ.‌

ಒಟ್ಟು ಮತಗಟ್ಟೆಗಳು 28, ಮತಗಟ್ಟೆಗೆ ಚುನಾವಣಾ ಸಿಬ್ಬಂದಿ 116, ಒಟ್ಟು ಮತದಾರರು 428, ಸೂಕ್ಷ್ಮ ಮತಗಟ್ಟೆಗಳು 2, ಮತದಾನದ ಸಮಯ ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯ ತನಕ. ನಿಕಟಪೂರ್ವ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಮತದಾನದ ಕೇಂದ್ರ ಸಾಲಿಗ್ರಾಮ ಪಟ್ಟಣ ಪಂಚಾಯತಿಯಾಗಿದೆ. ಮತದಾನದ ಬಳಿಕ ಮತ ಎಣಿಕೆಗೆ ಮಂಗಳೂರಿಗೆ ತಲುಪಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಬ್ರಹ್ಮಾವರ ತಾಲೂಕು ಪಂಚಾಯತಿ ಕಾರ್ಯ ನಿರ್ವಣಾಧಿಕಾರಿ ಎಚ್. ವಿ. ಇಬ್ರಾಹಿಂಪುರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್, ನಾನಾ ಇಲಾಖೆಯ ಅಶೋಕ್ ಪೂಜಾರಿ, ಪೂಜಾ ನಾಯಕ್, ನಿಧೀಶ್ ಉಪಸ್ಥಿತರಿದ್ದರು.

Edited By : Nagesh Gaonkar
PublicNext

PublicNext

20/10/2024 05:21 pm

Cinque Terre

45.15 K

Cinque Terre

1

ಸಂಬಂಧಿತ ಸುದ್ದಿ