ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮ್ಮನ ಪಾದದ ಬಳಿ ಬಿಕ್ಕಿಬಿಕ್ಕಿ ಅತ್ತ ಕಿಚ್ಚ

ಬೆಂಗಳೂರು : ನಟ ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ನಿಧನರಾಗಿದ್ದಾರೆ. ಇಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಸುದೀಪ್​​ ಅವರ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ತಾಯಿಯನ್ನು ಕಳೆದುಕೊಂಡ ನೋವು ಯಾರ ಬಳಿಯೂ ಹೇಳಿಕೊಳ್ಳೋದಕ್ಕೆ ಆಗೋದಿಲ್ಲ. ಕಿಚ್ಚ ಸುದೀಪ್‌ ಕೂಡ ಅಮ್ಮನ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಹೌದು, ಪ್ರೀತಿಯ ಅಮ್ಮನನ್ನು ಕಳೆದುಕೊಂಡಿರುವ ಕಿಚ್ಚ ಪುಟ್ಟ ಮಗುವಿನಂತೆ ಅತ್ತಿದ್ದಾರೆ.

ಇಂಥ ಒಂದು ಕಷ್ಟಕರವಾದ ಸಂದರ್ಭ ಬಹುತೇಕ ಎಲ್ಲ ಮಕ್ಕಳಿಗೂ ಬರುತ್ತೆ. ಆದರೆ ತಾಯಿಯನ್ನು ಕಳೆದುಕೊಂಡಾಗ ಆಗ ನೋವು ಮಾತ್ರ ಹೇಳತೀರದು.

ಕಿಚ್ಚನ ಕಣ್ಣಲ್ಲಿ ನೀರು ಕಂಡು ಅಲ್ಲಿ ನರೆದಿದ್ದವರು ಕೂಡ ಕಣ್ಣೀರು ಹಾಕಿದ್ದಾರೆ. ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್‌ ಸೇರಿ ಸಾಕಷ್ಟು ಗಣ್ಯರು ಸರೋಜಾ ಅವರ ಅಂತಿಮ ದರ್ಶನ ಪಡೆದರು.

ಕಿಚ್ಚ ಸುದೀಪ್‌ಗೆ ತಮ್ಮ ತಾಯಿ ಅಂದ್ರೆ ಬಲು ಪ್ರೀತಿ. ತನ್ನ ಮಗ ದೊಡ್ಡ ಹೀರೋ ಆಗಬೇಕೆಂಬ ಆಸೆ ಸರೋಜ ಅವರಿಗಿತ್ತು. ಅದರಂತೆ ಕಿಚ್ಚ ಇಂದು ಸೂಪರ್ ಸ್ಟಾರ್ ಆಗಿದ್ದಾರೆ. ಆದರೆ ಇನ್ನುಮುಂದೆ ಅವರ ತಾಯಿ ಅವರ ಜೊತೆ ಇರೋಲ್ಲ ಅನ್ನೋದೇ ದೊಡ್ಡ ನೋವು.

Edited By : Nirmala Aralikatti
PublicNext

PublicNext

20/10/2024 10:18 pm

Cinque Terre

56.05 K

Cinque Terre

1

ಸಂಬಂಧಿತ ಸುದ್ದಿ