ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಗ್ರಾಮಸ್ಥರ ಆಕ್ರೋಶ!!

ಬೈಂದೂರು: ಉಡುಪಿ ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯ ಹಿನ್ನೆಲೆಯಲ್ಲಿ, ಕಳೆದ ಎರಡು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ಚರಂಡಿಯ ಅವ್ಯವಸ್ಥೆಯಿಂದ ನಗು ಸಿಟಿ ಜಮೀನಿನಿಂದ ಹರಿದು ಬಂದ ಮಳೆಯ ನೀರು ತಗ್ಗು ಪ್ರದೇಶದ ಹೊಸಾಡು ಗ್ರಾಮದ ಮುಳ್ಳಿಕಟ್ಟಿ ಸಮೀಪವಿರುವ ಕೊಪ್ಪರಿಗೆ ನಿವಾಸಿಗಳ ವಾಸಿಸುವ ಮನೆಗಳಿಗೆ ನುಗ್ಗಿ ದ ನೀರು ಮನೆಯ ತೋಟ, ಗದ್ದೆ, ತೋಟ,ಕಂಪೌಂಡ್ ಗೋಡೆ ಸೇರಿದಂತೆ ಎರಡು ಬೈಕ್‌ಗಳಿಗೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾದರಿಂದ, ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ಸರಿಯಾದ ರಸ್ತೆಯ ಚರಂಡಿ ವ್ಯವಸ್ಥೆ, ಸರ್ವಿಸ್ ರಸ್ತೆ, ವಿದ್ಯುತ್ ದೀಪದ ಕಂಬ, ಬಸ್ ನಿಲ್ದಾಣ, ನಿರ್ಮಾಣ ಮಾಡದೆ ಅವಜ್ಞಾನಿಕವಾಗಿ ಕಾಮಗಾರಿ ಮಾಡಿ ಜನರ ಪ್ರಾಣದ ಮೇಲೆ ಚೆಲ್ಲಾಟ ಆಡುತ್ತಿರುವ ಗುತ್ತಿಗೆ ಪಡೆದಿರುವ ಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಲ್ಲಿ ಒಬ್ಬರಾದ ಪ್ರದೀಪ್ ಪೂಜಾರಿ ವಿನಂತಿ ಮಾಡಿಕೊಂಡರು.

ಘಟನೆಗೆ ಸಂಬಂಧಿಸಿದಂತೆ ಇಂದು ಹೊಸಾಡು ಗ್ರಾಮ್ ಪಂಚಾಯತ್ ಸಭಾಂಗಣದಲ್ಲಿ ಸ್ಥಳೀಯ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆ ಪಡೆದಿರುವ ಐಆರ್‌ಬಿ ಕಂಪನಿಯ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ರಸ್ತೆಯ ಕಾಮಗಾರಿಯೂ ವೈಜ್ಞಾನಿಕವಾಗಿ ನಡೆಸುವಂತೆ ಆಗ್ರಹಿಸಿದ್ದರು,

ಪತ್ರಿಕಾಗೋಷ್ಠಿಯಲ್ಲಿ, ವಿಶ್ವನಾಥ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಮಹಾಬಲ ಸುವರ್ಣ, ಚಂದ್ರ ಪೂಜಾರಿ, ಪ್ರದೀಪ್ ಪೂಜಾರಿ, ರಾಘು ಆಚಾರ್ಯ, ರಾಘು ಶೆಟ್ಟಿ, ಹಾಗೂ ಸ್ಥಳೀಯ ಸಾರ್ವಜನಿಕರು ಹಾಜರಿದ್ದರು.

Edited By : Nagesh Gaonkar
Kshetra Samachara

Kshetra Samachara

19/10/2024 06:53 pm

Cinque Terre

6.07 K

Cinque Terre

0

ಸಂಬಂಧಿತ ಸುದ್ದಿ