ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಸಾರ್ವಕಾಲಿಕ ಇತಿಹಾಸ ಸೃಷ್ಟಿಸಿದ ಕಾಫಿ ಬೆಲೆ

ಚಿಕ್ಕಮಗಳೂರು: ಕಾಫಿಗೆ ಐತಿಹಾಸಿಕ ಧಾರಣೆ ಬಂದಿದ್ದು ಈ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಪ್ರತಿ ಬಾರಿ ಅರೇಬಿಕಾ ಕಾಫಿಗಿಂತ ಕಡಿಮೆ ಧಾರಣೆ ಹೊಂದುತ್ತಿದ್ದ ರೊಬಸ್ಟಾ ಪಾರ್ಚ್‌ಮೆಂಟ್ ಈ ವರ್ಷ 50 ಕೆ.ಜಿ. ಬ್ಯಾಗ್‌ಗೆ 20 ಸಾವಿರ ರೂ ತಲುಪುವ ಮೂಲಕ ಕಾಫಿ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ.

ಕಾಫಿ ಧಾರಣೆ ಹೆಚ್ಚಾಗುತ್ತಿದ್ದಂತೆ ಇತ್ತ ಕಾಫಿಪುಡಿ ಬೆಲೆಯೂ ಗಗನಕ್ಕೇರಿದೆ. ಕಾಫಿ ಧಾರಣೆ 20,000 ರೂ.ಗೆ ತಲುಪಿರುವ ಜತೆಗೆ ಕೊರತೆಯೂ ಉಂಟಾಗಿದೆ. ಇದರಿಂದ ಚಿಕ್ಕಮಗಳೂರಿನಲ್ಲಿ ಉತ್ತಮ ಗುಣಮಟ್ಟದ ಕಾಫಿ ಪುಡಿ ಕೆ.ಜಿ.ಗೆ 500 ರೂ.ಗೆ ಮಾರಾಟವಾಗುತ್ತಿದೆ. ಇನ್ನೆರಡು ದಿನದಲ್ಲಿ ಕಾಫಿ ಪುಡಿ ದರವನ್ನು 560 ರೂ.ಗಳಿಗೆ ಹೆಚ್ಚಿಸಲು ಕಾಫಿ ವರ್ಕ್ಸ್ ಮಾಲೀಕರು ಚಿಂತನೆ ನಡೆಸಿದ್ದಾರೆ. ಹೋಟೆಲ್, ಕಾಫಿ ಶಾಪ್‌ ಗಳಲ್ಲೂ ಕಾಫಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದ್ದು, ಕಾಫಿ ಧಾರಣೆಯ ನಿಯಂತ್ರಣ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುವುದರಿಂದ ಇದರ ಮೇಲೆ ಸರಕಾರಗಳು ಹಿಡಿತ ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಬೆಲೆ ಏರಿಕೆಯ ಬಿಸಿಯನ್ನು ಗ್ರಾಹಕರು ಅನುಭವಿಸುವುದು ಅನಿವಾರ್ಯತೆ ಎದುರಾಗಿದೆ.

Edited By : PublicNext Desk
Kshetra Samachara

Kshetra Samachara

19/10/2024 11:51 am

Cinque Terre

600

Cinque Terre

0

ಸಂಬಂಧಿತ ಸುದ್ದಿ