ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಅಕಾಲಿಕ ಮಳೆಗೆ ಹಣ್ಣಾಗುತ್ತಿದೆ ಕಾಫಿ- ಸಂಕಷ್ಟದಲ್ಲಿ ಬೆಳೆಗಾರರು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಅವಧಿಗೂ ಮುನ್ನವೇ ಕಾಫಿ ಕಟಾವಿಗೆ ಬಂದಿದೆ. ಕಾಫಿ ಗಿಡಗಳಲ್ಲಿ ಮಧ್ಯೆ ಮಧ್ಯೆ ಕಾಫಿ ಹಣ್ಣಾಗುತ್ತಿದ್ದು, ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರತಿವರ್ಷ ನವೆಂಬರ್ ತಿಂಗಳ ಅಂತ್ಯದಲ್ಲಿ ಕಾಫಿ ಕಟಾವಿಗೆ ಬರುತ್ತಿತ್ತು. ಈ ಬಾರಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಗೆ ಕಾಫಿ ಹಣ್ಣಾಗುತ್ತಿದೆ. ಒಂದು ವೇಳೆ ಈಗ ಕಾಫಿ ಕಟಾವು ಮಾಡಿದರೆ ಒಂದೆಡೆ ಕಾರ್ಮಿಕರ ಕೊರತೆ ಹಾಗೂ ಕಾಫಿ ಒಣಗಿಸಲು ತೊಂದರೆಯಾಗುವುದರಿಂದ ಯಾರೂ ಕಾಫಿ ಕಟಾವು ಮಾಡುತ್ತಿಲ್ಲ. ಮಳೆ ಮುಂದುವರೆದರೆ ಕಾಫಿ ಹಣ್ಣು ಉದುರುವ ಭೀತಿ ಎದುರಾಗಿದೆ.

Edited By : Vinayak Patil
PublicNext

PublicNext

11/10/2024 06:18 pm

Cinque Terre

28.33 K

Cinque Terre

0

ಸಂಬಂಧಿತ ಸುದ್ದಿ