ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ಕಾಂಗ್ರೆಸ್ ಸರ್ಕಾರ - ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದ ಬಿಜೆಪಿ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದ ಹಿನ್ನೆಲೆ ವಿರೋಧ ಪಕ್ಷ ಸರ್ಕಾರದ ನಡೆಯನ್ನು ಖಂಡಿಸಿದೆ. ಈಗಾಗಲೇ ರಾಜ್ಯ ಸರ್ಕಾರದ ವಿರುದ್ಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ಮಾಡಿವೆ. ಆದ್ರೆ ಇದೀಗ ಬಿಜೆಪಿ ಪಕ್ಷದ ಪ್ರಮುಖರು ಕೂಡಾ ಸರ್ಕಾರದ ಈ ನಡೆ ಖಂಡಿಸಿ ಹುಬ್ಬಳ್ಳಿಯಲ್ಲಿ ಸರ್ಕಾರದ ವಿರುದ್ಧ ಬ್ರಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ವಾಟ್ಸ್‌ಆ್ಯಪ್ ಸ್ಟೇಟಸ್ ವಿಚಾರಕ್ಕೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಮುಂಬಾಗದಲ್ಲಿ ದೊಡ್ಡ ಪ್ರಮಾಣದ ಗಲಭೆ ಮಾಡಿ ಅಲ್ಲಿದ್ದ ಪೊಲೀಸ್ ಠಾಣೆ, ಪೊಲೀಸ್ ಸಿಬ್ಬಂದಿ ಹಾಗೂ ಪೊಲೀಸ್ ವಾಹನಗಳ ಮೇಲೆ ಕೂಡಾ ಗಲಭೆಕೋರರು ಕಲ್ಲು ಎಸೆದು ತಮ್ಮ ಅಟ್ಟಹಾಸ ಮೆರೆದಿದ್ದರು. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ್ರೆ ಇಲಾಖೆಯ ಆಸ್ತಿ ಪಾಸ್ತಿ ನಾಶವಾಗಿತ್ತು.

ಗಲಭೆ ದೇಶ್ಯಾದ್ಯಂತ ಸುದ್ದಿಯಾಗಿ ನೂರಕ್ಕೂ ಹೆಚ್ಚು ಗಲಭೆಕೋರರು ವರ್ಷಗಟ್ಟಲೆ ಜೈಲಿನಲ್ಲಿಯೇ ಕಾಲವನ್ನು ಕಳೆದಿದ್ದರೂ,ಆದ್ರೆ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಕೆಲವು ದಿನಗಳಲ್ಲೇ ಗಲಭೆಕೋರರ ವಿರುದ್ಧ ದಾಖಲಾದ ಪ್ರಕರಣವನ್ನು ಹಿಂದೆ ಪಡೆದಿದ್ದು, ಸಹಜವಾಗಿ ವಿರೋಧ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದು ಇದೆ ಬರುವ ಅಕ್ಟೋಬರ್ 25 ರಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ತಯಾರಿ ಮಾಡಿಕೊಳ್ಳಲಾಗಿದೆ ಅಂತಾ ವಿಜಯೇಂದ್ರ ಹೇಳಿದ್ದು ಹೀಗೆ.

ಸದ್ಯ ಎಲ್ಲರ ಚಿತ್ತ ಹಳೇ ಹುಬ್ಬಳ್ಳಿಯ ಗಲಭೆ ಪ್ರಕರಣದ ಕಡೆ ಮೂಡಿದ್ದು ವಿರೋಧ ಪಕ್ಷದವರಿಗೆ ಅಸ್ತ್ರವಾಗಿ ಪರಿಣಮಿಸಿದೆ. ಈ ಎಲ್ಲದರ ನಡುವೆ ಇದೀಗ ಪೊಲೀಸರಿಗೆ ಇದೆಂತ ಕಾಲ ಬಂತಯ್ಯ ಕಲ್ಲು ಎಸೆದವರಿಗೆ ಕರುಣೆ ತೋರಿದ ಸರ್ಕಾರದ ಪರವಾಗಿ ಕೆಲಸ ಮಾಡಬೇಕಾ? ಅಥವಾ ಪೊಲೀಸರ ಪರವಾಗಿ ನಿಂತ ಬಿಜೆಪಿ ಸರ್ಕಾರದ ವಿರುದ್ಧ ಕೆಲಸ ಮಾಡಬೇಕಾ? ಅನ್ನೋ ಪರಿಸ್ಥಿಯಲ್ಲಿ ಬಂದೋಬಸ್ತ್ ಮಾಡುವ ಅನಿವಾರ್ಯತೆ ಇದೀಗ ಪೊಲೀಸ್ ಇಲಾಖೆಗೆ ಮೂಡಿದ್ದಂತೂ ಸುಳ್ಳಲ್ಲಾ.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/10/2024 10:36 pm

Cinque Terre

16.97 K

Cinque Terre

6

ಸಂಬಂಧಿತ ಸುದ್ದಿ