ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅದು ಜಾತಿ ಜನಗಣತಿ ಅಲ್ಲ, ಕಾಂತರಾಜು ಸಮೀಕ್ಷೆ - ಬೆಲ್ಲದ್

ಧಾರವಾಡ: ಜಾತಿ ಜನಗಣತಿ ಹೇಳುತ್ತಿರುವುದು ಅದು ಜಾತಿ ಜನಗಣತಿ ಅಲ್ಲ. ಅದು ಕಾಂತರಾಜು ಸಮೀಕ್ಷೆ. ಚುನಾವಣೆ ಪೂರ್ವದಲ್ಲಿ ಸಾಕಷ್ಟು ಮಾಧ್ಯಮಗಳು ಸಮೀಕ್ಷೆ ಮಾಡಿರುತ್ತವೆ. ಅದಾದ ಬಳಿಕ ಯಾವ ರೀತಿ ಫಲಿತಾಂಶ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತೆ ಇದೆ. ಅದೇ ರೀತಿ ಕಾಂತರಾಜ ಅವರು ಸಮೀಕ್ಷೆ ಮಾಡಿದ್ದಾರೆ. ಅದೊಂದು ವರದಿ ಅಲ್ಲ. ಸಮೀಕ್ಷೆ ಅಷ್ಟೇ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿ ಅವರು, ಇವತ್ತು ಕಾಂತರಾಜು ಸಮಿತಿ ಏನು ವರದಿ ಕೊಟ್ಟಿದೆ. ಆ ಸಮೀಕ್ಷೆ ಮೇಲೆ ಸಿಎಂ ಅವರು ವರದಿ ಜಾರಿಗೆ ತರಲು ಹೊರಟಿದ್ದಾರೆ. ಅದಕ್ಕೆ ನಮ್ಮ ವಿರೋಧವಿದೆ. ಜಾತಿ ಗಣತಿಗೆ ವಿರೋಧ ಇಲ್ಲ. ಆದರೆ, ರಾಜ್ಯದಲ್ಲಿ ಮುಸ್ಲಿಂ ಸಮಾಜ ಹೆಚ್ಚು ಇದೆ ಎಂದು ಬಿಂಬಿಸಲು ಇದನ್ನು ಮಾಡುತ್ತಿದ್ದಾರೆ ಎಂದರು.

ಅಕ್ಟೋಬರ್‌ 22 ರಂದು ಅಖಿಲ ಭಾರತೀಯ ವೀರಶೈವ ಮಹಸಭಾದಿಂದ ಎಲ್ಲ ಬಿಜೆಪಿ ಶಾಸಕರ ಮಾಜಿ ಶಾಸಕರು ಸಭೆ ಇದೆ. ನಮಗೆ ಅನ್ಯಾಯವಾಗಲಿದೆ ಎಂಬ ಭಾವನೆ ವ್ಯಕ್ತಪಡಿಸುವ ನಿರ್ಧಾರ ಕೈಗೊಳ್ಳಲಿದ್ದೇವೆ. ವೈಜ್ಞಾನಿಕ ವಿಚಾರ ಅಲ್ಲ, ನಿಜವಾದ ಜಾತಿ ಜನ ಗಣತಿ ಹೊರ ತರಬೇಕಿದೆ. ಯಾವುದೇ ಸಮೀಕ್ಷೆ ಬೇಡ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/10/2024 10:21 pm

Cinque Terre

7.47 K

Cinque Terre

2

ಸಂಬಂಧಿತ ಸುದ್ದಿ