ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚನ್ನರಾಯಪಟ್ಟಣ: "ಸೈಬರ್ ಕ್ರೈಂ ಬಗ್ಗೆ ತಿಳಿದುಕೊಳ್ಳಿ"- ಗ್ರಾಮಸ್ಥರಿಗೆ ಕಾನೂನು ಅರಿವು, ಜಾಗೃತಿ

ಚನ್ನರಾಯಪಟ್ಟಣ: ತಾಲ್ಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆ ವತಿಯಿಂದ ಅಕ್ಕನಹಳ್ಳಿ ಕೂಡು ಗ್ರಾಮದಲ್ಲಿ ಗ್ರಾಮಸ್ಥರಿಗೆ ಹೆಚ್ಚುತ್ತಿರುವ ಕಳ್ಳತನ- ದರೋಡೆ ಹಾಗೂ ಸೈಬರ್ ಕ್ರೈಂ ಬಗ್ಗೆ ಕಾನೂನು ಅರಿವು ಮತ್ತು ಜಾಗೃತಿ ಮೂಡಿಸಲಾಯಿತು.

ಫೇಸ್‌ಬುಕ್, ವಾಟ್ಸಪ್, ಬ್ಯಾಂಕಿಂಗ್‌, ಆನ್‌ಲೈನ್‌ನಲ್ಲಿ ಲಾಟರಿ/ಗಿಫ್ಟ್ ಆಫರಿಂಗ್‌, ಜಾಬ್ ಆಫರಿಂಗ್, ಕಡಿಮೆ ಬಡ್ಡಿ ಸಾಲ ಕೊಡಿಸುವುದಾಗಿ ಹೇಳುವುದು, ಆನ್‌ಲೈನ್ ಶಾಪಿಂಗ್, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ನಡೆಯುವ ಅಪರಾಧ ಚಟುವಟಿಕೆಗಳು ಸೈಬರ್ ಕ್ರೈಂ ವ್ಯಾಪ್ತಿಗೆ ಬರಲಿವೆ. ಹೀಗಾಗಿ ಈ ಮಾದರಿಗಳಲ್ಲಿ ವ್ಯವಹಾರ ನಡೆಸುವಾಗ ಸಾರ್ವಜನಿಕರು ಎಚ್ಚರ ವಹಿಸಬೇಕೆಂಬ ಸಲಹೆಗಳನ್ನು ಪೊಲೀಸ್ ಇಲಾಖೆ ನೀಡಿತು.

Edited By : Manjunath H D
PublicNext

PublicNext

18/10/2024 08:56 pm

Cinque Terre

33.45 K

Cinque Terre

0

ಸಂಬಂಧಿತ ಸುದ್ದಿ