ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ: ಅಕ್ರಮ ಸಂಬಂಧಕ್ಕೆ ಅಡ್ಡಿ - ಪ್ರೇಯಸಿ ಪತಿಗೆ ಗಾಂಜಾ ಕೊಟ್ಟು ಜೈಲಿಗೆ ಕಳಿಸಲು ಸ್ಕೆಚ್ ಹಾಕಿದ್ದ ಆರೋಪಿ ಅರೆಸ್ಟ್

ಸಕಲೇಶಪುರ: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ ಪತಿಯನ್ನು ಗಾಂಜಾ ಮಾರಾಟ ಪ್ರಕರಣದಲ್ಲಿ ಜೈಲಿಗೆ ಕಳಿಸಲು ಹುನ್ನಾರ ನಡೆಸಿದ್ದ ವ್ಯಕ್ತಿಯೊಬ್ಬ ಪೊಲೀಸರ ಕಾರ್ಯಾಚರಣೆಯಿಂದ ತಾನೇ ಸಿಕ್ಕಿಬಿದ್ದ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.

ಮೂಡಿಗೆರೆ ಮೂಲದ ಮಹಮ್ಮದ್ ಉಸಾಮ್ ಹಾಗೂ ಆತನ ಮೂವರು ಸಹಚರರು ಬಂಧಿತರಾಗಿದ್ದು, ಅವರಿಂದ 1.36 ಕೆಜಿ ಗಾಂಜಾ ಹಾಗೂ ಕೃತ್ಯಕ್ಕ ಬಳಸಿದ ಒಂದು ಮಹೀಂದ್ರ ಥಾರ್ ವಾಹನ ವಶಕ್ಕೆ ಪಡೆಯಲಾಗಿದೆ. ಮಹಮ್ಮದ್ ಉಸಾಮ್, ಅಸ್ಸಾಂ ಮೂಲದ ಕೂಲಿ ಕಾರ್ಮಿಕ ಮುಕ್ತಾರ್ ಅಲಿ ಎಂಬಾತನ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಈ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಮುಕ್ತಾರ್ ಅಲಿಯನ್ನು ಗಾಂಜಾ ಮಾರಾಟ ಮಾಡುವ ಕೇಸ್‌ನಲ್ಲಿ ಸಿಕ್ಕಿಸಬೇಕು ಎಂಬ ದುರುದ್ದೇಶದಿಂದ, ಮಹಮ್ಮದ್ ತನ್ನ ಮೂವರು ಸಹಚರರೊಂದಿಗೆ ಸೇರಿ, 1.36 ಕೆಜಿ ಗಾಂಜಾವನ್ನು ಮುಕ್ತಾರ್ ಅಲಿಗೆಕೊಟ್ಟು ನಂತರ ಪೊಲೀಸರಿಗರ ಮಾಹಿತಿ ನೀಡಿದ್ದರು.

ಆದರೆ ಚಿಕ್ಕಮಗಳೂರು ನೋಂದಣಿಯ ಥಾರ್ ವಾಹನದ ಶಂಕಾಸ್ಪದ ಓಡಾಟ ಗಮನಿಸಿದ ಪೊಲೀಸರು ವಾಹನ ತಪಾಸಣೆಗೆ ಒಳಪಡಿಸಿದಾಗ 1.36 ಕೆಜಿ ಗಾಂಜಾ ಪತ್ತೆಯಾಯಿತು. ನಾಲ್ವರನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಅಮಾಯಕನನ್ನು ಗಾಂಜಾ ಕೇಸ್‌ನಲ್ಲಿ ಸಿಲುಕಿಸುವ ಸಂಚು ಬಯಲಾಗಿದೆ.

ಪೊಲೀಸರು ನಾಲ್ವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಸಕಲೇಶಪುರ ಸರ್ಕಲ್ ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಪೃಥ್ವಿ, ಸಿಬ್ಬಂದಿ ರೇವಣ್ಣ, ಶ್ರೀಧರ ಹಾಗೂ ಚಾಲಕ ರಘು ಭಾಗವಹಿಸಿದ್ದರು.

Edited By : Manjunath H D
PublicNext

PublicNext

12/10/2024 01:13 pm

Cinque Terre

27.62 K

Cinque Terre

0

ಸಂಬಂಧಿತ ಸುದ್ದಿ