ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‌ಬ್ರೈನ್‌ ವಾಶ್‌ ಮಾಡಿ ಹೆಣ್ಣುಮಕ್ಕಳನ್ನು ಆಶ್ರಮದಲ್ಲಿರಿಸಿದ್ದ ಪ್ರಕರಣದಿಂದ ಸದ್ಗರುಗೆ ಬಿಗ್‌ ರಿಲೀಫ್‌,ಕೇಸ್‌ ವಿಸರ್ಜನೆ ಮಾಡಿದ ಸುಪ್ರೀಂ ಕೋರ್ಟ್

ಸದ್ಗುರು ಆಶ್ರಮದಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಬ್ರೈನ್‌ ವಾಶ್‌ ಮಾಡಿ ಅಶ್ರಮದಲ್ಲೇ ವಾಸಿಸುವಂತೆ ಮಾಡಿದೆ ಎಂದು ಆರೋಪಿಸಿ ನಿವೃತ್ತ ಶಿಕ್ಷಕರೊಬ್ಬರು ಜಗ್ಗಿ ವಾಸುದೇವ ಅವರ ಆಶ್ರಮದ ವಿರುದ್ಧ ಹೇಬಿಯಸ್‌ ಕಾರ್ಪಾಸ್‌ ಹಾಕಿದ್ದರು.ಇದರ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್‌ ಇಂದು ತೀರ್ಪು ನೀಡಿದೆ. ಆಶ್ರಮದಲ್ಲಿ ಬಲವಂತವಿಲ್ಲದೆ ಸ್ವಯಂಪ್ರೇರಣೆಯಿಂದ ವಾಸಿಸುತ್ತಿರುವುದಾಗಿ ಇಬ್ಬರು ಹೆಣ್ಣು ಮಕ್ಕಳು ಹೇಳಿಕೆ ನೀಡಿದ ಆಧಾರದ ಮೇಲೆ ಕೋರ್ಟ್‌ ಜಡ್ಜ್‌ ಮೆಂಟ್‌ ನೀಡಿದ್ದು, ಸದ್ಗುರು ಗೆ ರಿಲೀಫ್‌ ಆಗಿದೆ, ಮಹಿಳೆಯರು ಸ್ವ ಇಚ್ಛೆಯಿಂದ ಸೇರಿರುವುದಾಗಿ ತಿಳಿಸಿರುವುದರಿಂದ ಈ ಕೇಸ್‌ ಅನ್ನು ಇಂದು ಕ್ಲೋಸ್‌ ಮಾಡಲಾಗಿದೆ. ಹೇಬಿಯಸ್ ಕಾರ್ಪಸ್ ಅರ್ಜಿಯಂತೆ ಮದ್ರಾಸ್ ಹೈಕೋರ್ಟ್ ಪೊಲೀಸ್ ವಿಚಾರಣೆಗೆ ಕರೆದು ಮಹಿಳೆಯರನ್ನು ಪ್ರಶ್ನಿಸದ್ದು ಹಾಗೂ ಇದರಿಂದ ಸಂಸ್ಥೆ ಅಥವಾ ವ್ಯಕ್ತಿಯ ಹೆಸರು ಕೆಡಿಸಲು ಸಾಧ್ಯವಿಲ್ಲ. ಇದು ಅಪ್ರಸ್ತುತ ಎಂದು ನ್ಯಾಯಾಮೂರ್ತಿಗಳು ಮದ್ರಾಸ್‌ ಹೈ ಕೋರ್ಟ್‌ ಅನ್ನು ಮಧ್ಯ ಎಳೆದು ತಂದಂತಹ ಪ್ರಸಂಗ ನಡೆಯಿತು.

ತಮಿಳುನಾಡು ಪೊಲೀಸರು ಇಶಾ ಫೌಂಡೇಶನ್ ಬಗ್ಗೆ ಆರೋಪದ ಪಟ್ಟಿಯನ್ನೇ ಹೊಂದಿದ್ದರು.ಪ್ರತಿ ಅರ್ಜಿಯಲ್ಲಿ, ಫೌಂಡೇಶನ್‌ಗೆ ಸಂಬಂಧಿಸಿದ ನಾಪತ್ತೆ ಪ್ರಕರಣಗಳನ್ನು ಪೊಲೀಸರು ಎತ್ತಿ ತೋರಿಸಿದ್ದಾರೆ. ಕೊಯಮತ್ತೂರು ಪೊಲೀಸ್ ಅಧೀಕ್ಷಕ ಕೆ ಕಾರ್ತಿಕೇಯನ್ ಪ್ರಕಾರ, ಕಳೆದ 15 ವರ್ಷಗಳಿಂದ ಆಲಂದೂರೈ ಪೊಲೀಸ್ ಠಾಣೆಯಲ್ಲಿ ಆರು ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಐದು ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ ಮತ್ತು ಒಂದು ತನಿಖೆ ಇನ್ನೂ ನಡೆಯುತ್ತಿದೆ.

Edited By : Somashekar
PublicNext

PublicNext

18/10/2024 05:14 pm

Cinque Terre

26.39 K

Cinque Terre

2