ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಅಕ್ಟೋಬರ್‌ 23 ರಂದು ಹೊಳಲಿಗ್ರಾಮದ ಬಳಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಕೋಲಾರ: ಕರ್ನಾಟಕ ರಾಜ್ಯ ಕ್ರಿಕೇಟ್ ಅಸೋಸಿಯೇಷನ್ ವತಿಯಿಂದ ತಾಲ್ಲೂಕಿನ ಮುಳಬಾಗಿಲು ಹೆದ್ದಾರಿ ಸಮೀಪದ ಹೊಳಲಿ ಬಳಿ 16 ಎಕರೆ ಜಾಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತವಾದ ನೂತನ ಕ್ರಿಕೆಟ್ ಕ್ರೀಡಾಂಗಣದ ಗುದ್ಧಲಿಪೂಜೆ ಕಾರ್ಯಕ್ರಮವನ್ನು ಅ, 23 ರಂದು ನಿಗಧಿ ಪಡೆಸಲಾಗಿದೆ ಎಂದು ಅಸೋಸಿಯೇಷನ್ ಸಂಚಾಲಕ ಅಯಿಲ್ ರಮೇಶ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 6-7 ವರ್ಷಗಳಿಂದ ಕೋಲಾರ ಜಿಲ್ಲಾ ಕೇಂದ್ರದಲ್ಲಿ

ಸುಸಜ್ಜಿತವಾದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸ ಬೇಕೆಂಬುವುದು ಕ್ರಿಕೆಟ್ ಕ್ರೀಡಾ ಪಟುಗಳ ಬಹುದಿನದ ಕನಸಾಗಿತ್ತು. ಅದು ಈಗಾ ನನಸಾಗುವ ಕಾಲ ಬಂದಿದೆ ಎಂದು ಹೇಳಿದರು.‌

ಈಗಾಗಲೇ ರಾಜ್ಯದ ಮಂಗಳೂರು, ಉಡುಪಿ, ಪುತ್ತೂರು, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಾಯಕ ಬ್ರಿಜೆಷ್ ಪಟೇಲ್ ಅವರ ಮಾರ್ಗದರ್ಶನದಲ್ಲಿ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ ಎಂದರು.

ಅಸೋಸಿಯೇಷನ್ ವತಿಯಿಂದ ಹೊಳಲಿ ಬಳಿ 28 ಎಕರೆ ಜಾಗದ ಪ್ರಸ್ತಾವನೆಯನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರವು ಪ್ರಸ್ತುತ 16 ಎಕರೆ ಮಂಜೂರು ಮಾಡಿದ್ದು ಮುಂದಿನ ದಿನಗಳಲ್ಲಿ ಉಳಿದ 8 ಎಕರೆ ಮಂಜೂರಾತಿ

ಮಾಡುವ ನಿರೀಕ್ಷೆ ಇದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕ್ರಿಕೆಟ್ ಕ್ರೀಡಾ ಪಟುಗಳಾದ ಮಂಜುನಾಥ್, ವಿಜಯ್ ಸಾಗರ್ ಶೆಟ್ಟಿ , ಅಡಿಗ ರಘು, ಓಂಶಕ್ತಿ ಚಲಪತಿ, ಕಿಟ್ಟಿ, ಪುಟ್ಟಸ್ವಾಮಿ, ಹೊಲ್ಲಂಬಳ್ಳಿ ಚಂದ್ರಶೇಖರ್. ಉಲ್ಲಾಸ್ ಸನ್ನಿರಾಜ್, ಪ್ರಭಾಕರ್, ಶಿವು, ಮಂಜುನಾಥ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/10/2024 04:28 pm

Cinque Terre

500

Cinque Terre

0

ಸಂಬಂಧಿತ ಸುದ್ದಿ