ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಜಸ್ಟ್ ಮಿಸ್... ಬಿಎಂಟಿಸಿ ಎಡವಟ್ಟು

ಬೆಂಗಳೂರು: ನಿರ್ವಹಣೆ ಇಲ್ಲದ ಬಸ್ ರಸ್ತೆಗೆ ಇಳಿಸಿ ಆ ಬಸ್ ಡಿವೈಡರ್ ಮೇಲೆ ಹತ್ತಿದ ಪ್ರಸಂಗ ನಡೆದಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಬನಶಂಕರಿ ಬಸ್ ಸ್ಟ್ಯಾಂಡ್‌ ಬಳಿ ನಡೆದಿರುವ ಘಟನೆ ಇದಾಗಿದ್ದು ಡಿಪೋ- 20 ಬನಶಂಕರಿಗೆ ಸೇರಿದ ಬಸ್ ಅಂತ ಗುರುತಿಸಲಾಗಿದೆ.

ಡಿಪೋದಿಂದ ಬಸ್ ಹೊರಗೆ ಬರ್ತಿದ್ದಂತೆ ಅರ್ಧದಷ್ಟು ಬಸ್ ಡಿವೈಡರ್ ಮೇಲೆ ಹತ್ತಿದ್ದು ಬಸ್ ಕೆಳಗೆ ಇಳಿಸಲು ಚಾಲಕ ಹರಸಾಹಸ ಪಟ್ಟ ಪ್ರಸಂಗ ನಡೆಯಿತು. ಬಸ್ ನಂ- KA- 57

F0361 ಡಿಪೋದಿಂದ ಬಸ್ ಸ್ಟ್ಯಾಂಡ್ ಗೆ ಹೋಗುತ್ತಿತ್ತು. ಆದ್ರೆ ಸ್ಟೇರಿಂಗ್ ಸಮಸ್ಯೆಯಾಗಿ ಡಿವೈಡರ್ ಗೆ ಬಿಎಂಟಿಸಿ ಬಸ್ ಗುದ್ದಿದ್ದು ಡಿಪೋದಿಂದ ಹೊರ ಬರುವಾಗ ಬಸ್ ನ್ನು ಚೆಕ್ ಮಾಡದೇ ಹಾಗೇ ಹೊರ ಬಂದಿರುವ ಅನುಮಾನ ವ್ಯಕ್ತವಾಗಿದೆ.

Edited By : Shivu K
PublicNext

PublicNext

18/10/2024 01:06 pm

Cinque Terre

13.34 K

Cinque Terre

0