ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕನ ಮೇಲೆ‌ ಶ್ವಾನಗಳ ಡೆಡ್ಲಿ ದಾಳಿ..ಬಿಬಿಎಂಗೆ ಜನ ಛೀಮಾರಿ

ಬೆಂಗಳೂರು : ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ದಾಳಿ ಪ್ರಕರಣ ಡಬಲ್ ಆಗುತ್ತಿದೆ. ನಡೆದುಕೊಂಡು ಹೋಗ್ತಿದ್ದ ಬಾಲಕನ ಮೇಲೆ ನಾಯಿ ದಾಳಿ ಮಾಡಲು ಬಂದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೂಡಲೇ ಬಾಲಕನ ರಕ್ಷಣೆಗೆ ಬಂದ ಅಲ್ಲಿದ್ದ ವ್ಯಕ್ತಿ ಬೀದಿ ನಾಯಿಗಳಿಂದ ಕಾಪಾಡಿದ್ದಾರೆ. ಇದು HBR ಲೇಔಟ್ ನ 3ನೇ ಬ್ಲಾಕ್ 6ನೇ ಮುಖ್ಯರಸ್ತೆಯಲ್ಲಿ ನಡೆದಿರುವ ಘಟನೆಯಾಗಿದ್ದು ಬಾಲಕನ ಮೇಲಿನ ದಾಳಿಯ ಬಗ್ಗೆ ಬಿಬಿಎಂಪಿ ಕಮಿಷನರ್ ಗೆ ಕೂಡ ದೂರು ಕೊಡಲಾಗಿದೆ.

ಇದೆಲ್ಲದರ ಮಧ್ಯೆ ನಿನ್ನೆಯಷ್ಟೇ ಬಿಬಿಎಂಪಿ ಸಮಾಜಕ್ಕೆ ನಾಯಿಗಳ ಸಕಾರಾತ್ಮಕ ಕೊಡುಗೆಗಳನ್ನು ಆಚರಿಸಲು ನಾಯಿಗಳ ಉತ್ಸವ ಕಾರ್ಯಕ್ರಮ ಮಾಡಿದ್ದಾರೆ. ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಣಿಗಳು ಹಾಗೂ ಮಾನವ ಸಂಘರ್ಷ ಕಡಿಮೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಿದ್ದು, ಪ್ರತಿ ವರ್ಡ್ ಗಳಲ್ಲಿ ನಿರಂತರವಾಗಿ ಪ್ರತಿದಿನ ಒಂದು ಬಾರಿ ಆಹಾರವನ್ನು ನೀಡುವ ಯೋಜನೆ ಜಾರಿ ಮಾಡಿದ್ದಾರೆ.

ಸದ್ಯ ಬಿಬಿಎಂಪಿ ಈ ನಡೆಗೆ ಜನ ಕಂಗಾಲಾಗಿದ್ದಾರೆ. ನಿತ್ಯ ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಜೀವನ ಮಾಡಲು ಹೆಣಗಾಡುತ್ತಿರುವ ಮಧ್ಯೆ ಬಿಬಿಎಂಪಿ ಹಣ ಹೊಡೆಯಲು ಬೀದಿಗಳ ರಕ್ಷಣೆಗೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದೇ ಯಕ್ಷ ಪ್ರಶ್ನೆ.

ಬೀದಿ ನಾಯಿಗಳ ಹಾವಳಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ ಮಾಡಿ

Edited By : Somashekar
PublicNext

PublicNext

18/10/2024 12:33 pm

Cinque Terre

10.85 K

Cinque Terre

0

ಸಂಬಂಧಿತ ಸುದ್ದಿ