ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಮಸಾಲಿ 2 ಎ ಮೀಸಲಾತಿ ಬೇಡಿಕೆ - ಸಿಎಂ ಸಿದ್ದರಾಮಯ್ಯ ಜೊತೆ ಜಯ ಮೃತ್ಯುಂಜಯ ಸ್ವಾಮೀಜಿ ಮಹತ್ವದ ಸಭೆ

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಬೇಡಿಕೆ ಕುರಿತು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗದೊಂದಿಗೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದರು.

ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್‌, ಶಿವರಾಜ ತಂಗಡಗಿ, ಶಾಸಕರುಗಳಾದ ವಿನಯ್ ಕುಲಕರ್ಣಿ, ವಿಜಯ್ ಕಾಶಪ್ಪನವರ್, ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು, ಸಮುದಾಯದ 40 ಕ್ಕೂ ಹೆಚ್ಚು ಮುಖಂಡರು, ವಕೀಲರು ಮತ್ತು ಪ್ರಮುಖರು ಉಪಸ್ಥಿತರಿದ್ದರು.

ಸಿಎಂ ಸಮ್ಮುಖದಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ಸಮುದಾಯದ ಹಲವು ಬೇಡಿಕೆಗಳನ್ನ ಮುಂದೆ ಇಟ್ಟರು ಅದ್ರಲ್ಲಿ ಪ್ರಮುಖವಾಗಿ ೨ ಎ ಮೀಸಲಾತಿ ಜಾರಿಗೆ ಒತ್ತಾಯಿಸಿದ್ದಾರೆ, ಮೀಸಲಾತಿ ಕುರಿತು ನಮ್ಮ ಬೇಡಿಕೆ ಈಡೇರಿಸಬೇಕು, ನಾವು ಹಿಂದಿನ ಬಿಜೆಪಿ ಸರ್ಕಾರದ ಮುಂದೆಯೋ ನಮ್ಮ ಬೇಡಿಕೆ ಇಟ್ಟಿದ್ವಿ ಆದ್ರೆ ಅದು ಸರಿಯಾಗಿ ಫಲಪ್ರದವಾಗಲಿಲ್ಲ ನೀವು ಬೇಡಿಕೆ ಈಡಿರಿಸಿಲ್ಲ ಅಂದ್ರೆ ನಾವು ಹೋರಾಟದ ಹಾದಿ ಒಂದೇ ದಾರಿ ಎಂದು ಸಭೆಯಲ್ಲಿ ಸ್ವಾಮೀಜಿ ಸಿಎಂಗೆ ಮನವಿ ಮಾಡಿದ್ದಾರೆ.

Edited By : Suman K
PublicNext

PublicNext

18/10/2024 02:52 pm

Cinque Terre

5.92 K

Cinque Terre

0

ಸಂಬಂಧಿತ ಸುದ್ದಿ