ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಹೆಣ ಸಾಗಾಟಕ್ಕೆ ಕಿತ್ತಾಟ : ಆಂಬುಲೆನ್ಸ್ ಡ್ರೈವರ್ ಗೆ ಹಿಗ್ಗಾಮುಗ್ಗಾ ಥಳಿತ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹೆಣ ಸಾಗಾಟಕ್ಕೂ ಬಡಿದಾಡಿಕೊಂಡಿದ್ದಾರೆ.

ಹೆಣ ಸಾಗಾಟದ ವಿಚಾರವಾಗಿ ಇಬ್ಬರು ಗಲಾಟೆಯಾಗಿ ಆಂಬುಲೆನ್ಸ್ ಡ್ರೈವರ್ ಗಳ ಮೇಲೆ ಹಲ್ಲೆ ಮಾಡಿರೋ ಘಟನೆ ಬೆಳಕಿಗೆ ಬಂದಿದೆ.

ಕಳೆದ 15ನೇ ತಾರೀಕು ಪೀಣ್ಯಾ ಎಸ್ ಆರ್ ಎಸ್ ಚಿತಾಗಾರದಲ್ಲಿ ಹೆಣಕ್ಕಾಗಿ ಆಂಬುಲೆನ್ಸ್ ಡ್ರೈವರ್ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಶಿವರಾಜು ಹಾಗೂ ಶ್ರೀಕಾಂತ್ ಎಂಬುವ ಆಂಬುಲೆನ್ಸ್ ಡ್ರೈವರ್ ಗಳ ಮೇಲೆ ಮಹದೇವಮ್ಮ ಹಾಗೂ ಆಟೋ ಮಂಜು ಎಂಬುವವರು ಹಲ್ಲೆ ನಡೆಸಿರೋದಾಗಿ ದೂರು ದಾಖಲಾಗಿದೆ. ಪೀಣ್ಯಾದ ಎಸ್ ಆರ್ ಎಸ್ ಚಿತಗಾರದ ಮೇಲ್ವಿಚಾರಕಿಯಾಗಿರುವ ಮಹಾದೇವಮ್ಮ ಸ್ವಂತ ಆ್ಯಂಬುಲೆನ್ಸ್ ಸರ್ವೀಸ್ ಕೂಡ ಹೊಂದಿದ್ದಾರಂತೆ.

ಆಟೋ ಮಂಜು ಎಂಬಾತನನ್ನ ಡ್ರೈವರ್ ಆಗಿ ಇಟ್ಕೊಂಡು ಮಹದೇವಮ್ಮ ಆ್ಯಂಬುಲೆನ್ಸ್ ಸರ್ವೀಸ್ ನಡೆಸ್ತಿದ್ದಾರೆ. ನೆಲಮಂಗಲದ ಸರ್ಕಾರಿ ಆಸ್ಪತ್ರೆಯಿಂದ ಪ್ರಿಯಾಂಕ ಎಂಬುವರ ಮೃತ ದೇಹವನ್ನು ಶಿವರಾಜು ಹಾಗೂ ಶ್ರೀಕಾಂತ್ ಎಸ್ ಆರ್ ಎಸ್ ಚಿತಾಗಾರಕ್ಕೆ ತಂದಿದ್ದಾರೆ. ನಂತರ ಬರ್ನಿಂಗ್ ಬೇಡ ನಮ್ಮ ಜಮೀನಲ್ಲೆ ಹುಳುವ ಎಂದು ಮೃತಳ ಕುಟುಂಬಸ್ಥರು ಮಾತನಾಡಿಕೊಂಡು ಬರ್ನಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಆದ್ರೆ ಮತ್ತೆ ಬರ್ನಿಂಗ್ ಮಾಡೋಕೆ ಮುಂದಾಗಿದ್ದಾರೆ. ಈ ವೇಳೆ ಮತ್ತೆ ಮೃತದೇಹ ತೆಗೆದುಕೊಂಡು ಹೋಗುವ ವಿಚಾರಕ್ಕೆ ಶ್ರೀಕಾಂತ ಹಾಗೂ ಶಿವರಾಜ್ ಜೊತೆ ಜಗಳ ತೆಗೆದು ಮಹಾದೇವಮ್ಮ ಹಾಗೂ ಆಟೋ ಮಂಜು ಹಲ್ಲೆ ನಡೆಸಿದ್ದಾರಂತೆ. ಆಕ್ಸಾ ಬ್ಲೇಡ್ ಪ್ರೇಮ್ ನಿಂದ ಹಲ್ಲೆ ಮಾಡಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ,ನಮಗೆ ಬಂದಿರೋ ಬಾಡಿಗೆಯನ್ನು ನೀವು ತೆಗೆದುಕೊಂಡಿದ್ದು ಯಾಕೆ?

ಬೆಳಗ್ಗೆ ಚಿತಾಗಾರಕ್ಕೆ ಕರೆ ಮಾಡಿ ದಫನ್ ಮಾಡುವುದಕ್ಕೆ ವಿಚಾರಿಸಿದ್ರು. ಈ ವೇಳೆ ನಮ್ಮದೇ ಆ್ಯಂಬುಲೆನ್ಸ್ ಸರ್ವೀಸ್ ಇದೆ ಎಂದು ಹೇಳಿದ್ದೆ.

ಇದಕ್ಕಾಗಿ 2,500 ಹಣ ಕೂಡ ಟ್ರಾನ್ಸ್ಫರ್ ಮಾಡಿದ್ದಾರೆ. ನಂತರ ದಫನ್ ಮಾಡುವ ಬದಲಾಗಿ ಮಣ್ಣು ಮಾಡುವುದಾಗಿ ನಿರ್ಧಾರ ಮಾಡಿದ್ರು. ಹೀಗಾಗಿ ಶವಾಗಾರಕ್ಕೆ ಕರೆ ಮಾಡಿ ಹಣ ವಾಪಸ್ಸು ಪಡೆದಿದ್ರು.

ನಂತರ ಮತ್ತೆ ಪ್ರಿಯಾಂಕ ಮೃತದೇಹ ದಫನ್ ಮಾಡಲು ನಿರ್ಧಾರ ಮಾಡಿದ್ದಾರೆ. ಈ ವೇಳೆ ಶವಾಗಾರಕ್ಕೆ ನೆಲಮಂಗಲದಿಂದ ಶಿವರಾಜ್ ಆಂಬುಲೆನ್ಸ್ ನಲ್ಲಿ ಮೃತದೇಹ ತಂದಿದ್ದಾರೆ.

ಇದೇ ವಿಚಾರಕ್ಕೆ ನಮಗೆ ಬಂದ ಆರ್ಡರ್ ನ ನೀವು ತಂದಿದ್ದೀರಾ ಅಂತಾ ಪ್ರಶ್ನೆ ಮಾಡಿ ಜಗಳ ಮಾಡಿ ನಾವು ಲೋಕಲ್, ನಮ್ಮನ್ನ ಎದುರಾಕೊಂಡ್ರೆ ಸರಿ ಇರಲ್ಲ ಎಂದು ಮಹದೇವಮ್ಮ ಧಮ್ಕಿ ಹಾಕಿ ದಫನ್ ಮಾಡಲು 5 ಸಾವಿರ ಹೆಚ್ಚುವರಿ ಹಣ ಕೇಳಿದ್ದಾರಂದು ಆರೋಪ‌ ಕೇಳಿ ಬಂದಿದೆ.

ಸದ್ಯ ಘಟನೆ ಸಂಬಂದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ಶ್ರೀಕಾಂತ್, ಶಿವರಾಜ್ ದೂರು ನೀಡಿದ್ದು ಎಫ್ ಐ ಆರ್ ದಾಖಲಿಸಿ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

Edited By : Shivu K
PublicNext

PublicNext

18/10/2024 10:43 am

Cinque Terre

15.48 K

Cinque Terre

0

ಸಂಬಂಧಿತ ಸುದ್ದಿ