ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ನಿವೇದನ್‌ ವೀಡಿಯೊ, ಪೋಟೊ ನೋಡಿ ಕಣ್ಣೀರಾದ ಜನ- ಅಂತಿಮ ನಮನ

ಹಾವೇರಿ: ಚರಂಡಿಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ನಿವೇದನ್ ಅಂತಿಮ ಯಾತ್ರೆಗೆ ಮುನ್ನ ಆತನ ವೀಡಿಯೊ, ಪೋಟೊಗಳು ನೆರೆದವರ ಮೊಬೈಲ್‌ ಗಳಲ್ಲಿ ಹರಿದಾಡಿದವು. ಅಣ್ಣ ನಿವೇದನ್ ಹುಟ್ಟುಹಬ್ಬಕ್ಕೆ ತಂಗಿ ಆದ್ಯಾ ಶುಭ‌ ಕೋರಿದ ವೀಡಿಯೊ ನೋಡಿ ಜನರು ಕಣ್ಣೀರಾದರು.

ಮೊನ್ನೆಯಷ್ಟೇ ಆಯುಧ ಪೂಜೆಯ ದಿನ ಸೈಕಲ್ ಗೆ ಪೂಜೆ ಮಾಡಿದ್ದ ನಿವೇದನ್ ನ ಸೈಕಲ್ ಅನಾಥವಾಗಿ ಬಿದ್ದಿತ್ತು. ತಾಯಿ ಜೊತೆ ಸಂಬಂಧಿಕರ ಜೊತೆ ತೆಗೆಸಿಕೊಂಡ ಪೋಟೊಗಳು ನಿವೇದನ್ ಮರಣಿಸಿಲ್ಲ ಎನ್ನುವಂತಿದ್ದವು.

ನಿವೇದನ್ ಜೀವಂತವಾಗಿ ಬರಲಿ...‌ ಎಂಬ ಜನರ ನಿವೇದನೆ ದೇವರಿಗೆ ತಲುಪಲೇ ಇಲ್ಲ ಎಂದು ಜನ ಮಮ್ಮಲ ಮರುಗಿದರು. ಮುಂಜಾನೆ ಲವಲವಿಕೆಯಿಂದ ಇದ್ದ ನಿವೇದನ್ ಇನ್ನು ನೆನಪು ಮಾತ್ರ ಎಂಬ ಕಹಿಸತ್ಯದೊಂದಿಗೆ ಜನರು ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು.

Edited By : Manjunath H D
PublicNext

PublicNext

17/10/2024 10:59 pm

Cinque Terre

36.61 K

Cinque Terre

1