ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅಕಾಲಿಕ ಹಿಂಗಾರು ಮಳೆ- ಅಪಾರ ಬೆಳೆ ಹಾನಿ

ಮುಲ್ಕಿ: ತಾಲೂಕು ವ್ಯಾಪ್ತಿಯಲ್ಲಿ ಅಕಾಲಿಕ ಹಿಂಗಾರು ಮಳೆಗೆ ಅಪಾರ ಬೆಳೆ ಹಾನಿಯಾಗಿದೆ. ತಾಲ್ಲೂಕು ವ್ಯಾಪ್ತಿಯ ಕೃಷಿ ಪ್ರಧಾನ ಪ್ರದೇಶಗಳಾದ ಶಿಮಂತೂರು, ಕಿಲೆಂಜೂರು, ಪಕ್ಷಿಕೆರೆ ಪಂಜ, ಪಡು ಪಣಂಬೂರು ತೋಕೂರು, ಹಳೆಯಂಗಡಿ , ಚೇಳಾಯರು, ಪ್ರದೇಶಗಳಲ್ಲಿ ಅಕಾಲಿಕ ಹಿಂಗಾರು ಮಳೆಯಿಂದ ನೂರಾರು ಎಕರೆ ಗದ್ದೆಯಲ್ಲಿ ನೀರು ನಿಂತಿದ್ದು ಭತ್ತದ ಪೈರುಗಳು ನೀರಿನಲ್ಲಿ ಮುಳುಗಿ ಲಕ್ಷಾಂತರ ಮೌಲ್ಯದ ನಷ್ಟ ಸಂಭವಿಸಿದೆ.

ಈ ಬಾರಿ ಅಧಿಕ ಮಳೆಯಿಂದ ಮೊದಲ ಬಾರಿ ಬಿತ್ತನೆ ಹಾನಿಯಾಗಿದ್ದು ಮರು ಬಿತ್ತನೆ ನಡೆಸಲಾಗಿದೆ ಆದರೆ ಮುಂಗಾರು ಮಳೆ ಅಬ್ಬರದಿಂದ ಲಕ್ಷಾಂತರ ಮೌಲ್ಯದ ಕೃಷಿ ಹಾನಿ ಸಂಭವಿಸಿದೆ ಎಂದು ಕೃಷಿಕ ಹಾಗೂ ನಿವೃತ್ತ ಯೋಧ ಕುಬೆವೂರು ನಾರಾಯಣ್ ರೈ ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ಕೃಷಿ ಇಲಾಖೆ ಮಧ್ಯ ಪ್ರವೇಶಿಸಿ ಕೃಷಿ ಹಾನಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಇಲಾಖೆಯನ್ನು ಆಗ್ರಹಿಸಿದ್ದಾರೆ.

Edited By : Suman K
Kshetra Samachara

Kshetra Samachara

17/10/2024 03:03 pm

Cinque Terre

2.39 K

Cinque Terre

0

ಸಂಬಂಧಿತ ಸುದ್ದಿ