ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BREAKING : 'ಕಾನೂನು ಕುರುಡಲ್ಲ' ಎಂಬ ಸಂದೇಶ ಸಾರಿದ ಸುಪ್ರೀಂ : ಕಣ್ಣು ತೆರೆದ ನ್ಯಾಯ ದೇವತೆಯ ಪ್ರತಿಮೆ ಅನಾವರಣ

ನವದೆಹಲಿ: ಲೇಡಿ ಆಫ್ ಜಸ್ಟಿಸ್ ನ್ಯಾಯದೇವತೆ ಪ್ರತಿಮೆಯ ಮೇಲಿನ ಕಣ್ಣಿಗೆ ಪಟ್ಟಿಯನ್ನು ತೆಗೆದುಹಾಕಲಾಗಿದೆ. ಆಕೆಯ ಎಡಗೈಯಲ್ಲಿ ಕತ್ತಿಯ ಬದಲಾಗಿ ಸಂವಿಧಾನದ ಪುಸ್ತಕವನ್ನು ಇರಿಸಲಾಗಿದೆ.

ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ ನ್ಯಾಯದೇವತೆಯ ಪ್ರತಿಮೆಯ ಬದಲು ಕಣ್ಣು ತೆರೆದ ನ್ಯಾಯ ದೇವತೆಯ ಪ್ರತಿಮೆಯನ್ನು ಸುಪ್ರೀಂ ಕೋರ್ಟ್​ನಲ್ಲಿ ಅನಾವರಣಗೊಳಿಸಲಾಗಿದೆ.

ಈ ಹಿಂದಿನ ಪ್ರತಿಮೆಯ ಕೈಯಲ್ಲಿದ್ದ ಕತ್ತಿಯ ಬದಲಾಗಿ ಹೊಸ ನ್ಯಾಯದೇವತೆಯ ಕೈಯಲ್ಲಿ ಸಂವಿಧಾನದ ಪುಸ್ತಕವನ್ನು ಇರಿಸಲಾಗಿದೆ. ಕಾನೂನು ಕುರುಡಲ್ಲ ಎಂಬ ಸಂದೇಶ ಸಾರುವ ಸಲುವಾಗಿ ಈ ಹೊಸ ಪ್ರತಿಮೆ ನಿರ್ಮಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಈ ಹೊಸ ಪ್ರತಿಮೆಯ ಅನಾವರಣ ಮಾಡಿದ್ದು, ಭಾರತೀಯ ನ್ಯಾಯದ ವಿಕಾಸದ ಸ್ವರೂಪವನ್ನು ಒತ್ತಿಹೇಳಿದ್ದಾರೆ.

Edited By : Abhishek Kamoji
PublicNext

PublicNext

16/10/2024 10:28 pm

Cinque Terre

28.38 K

Cinque Terre

13

ಸಂಬಂಧಿತ ಸುದ್ದಿ