ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದಿ ಬಿಗ್ ಬಾಸ್ 18 ಮಿತಿ ಮೀರಿದ ಗಲಾಟೆ,ಅವಿನಾಶ್ ಮತ್ತು ಚುಮ್ ಗಲಾಟೆಯಲ್ಲಿ ಮನೆಯಿಂದ ಔಟ್‌ ಆದ ಅವಿನಾಶ್

ಹಿಂದಿ ಬಿಗ್ ಬಾಸ್ 18 ರಲ್ಲಿ ಕಿರುತೆರೆ ನಟ ಅವಿನಾಶ್ ಮಿಶ್ರಾ ಅವರು ಸಹ-ಸ್ಪರ್ಧಿ ಚುಮ್ ದರಾಂಗ್ ಅವರೊಂದಿಗೆ ಜಗಳವಾಡಿದ ಕಾರಣ ಬಿಗ್‌ ಬಾಸ್‌ ಶೋ ನಿಂದ ಹೊರ ಹಾಕಲಾಗಿದೆ.ಮುಂಬರುವ ಎಪಿಸೋಡ್‌ನ ಪ್ರೋಮೋ ವಿಡಿಯೋ ಕೂಡ ಹೊರಬಿದ್ದಿದ್ದು, ಇದು ಅವಿನಾಶ್ ಮತ್ತು ಚುಮ್ ಅವರ ವಾಗ್ವಾದದ ಪ್ರೋಮೋ ಹೊಂದಿದೆ.ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಟಾಸ್ಕ್‌ ಅನ್ನು ನೀಡಲಾಗಿತ್ತು,ಅವಿನಾಶ್ ಮತ್ತು ಚುಮ್ ಇಬ್ಬರನ್ನು ಜೈಲಿಗೆ ಕಳುಹಿಸಬೇಕೆ ಅಥವಾ ಒಬ್ಬರನ್ನು ಹೊರಹಾಕಬೇಕೆ ಎಂದು ನಿರ್ಧರಿಸಬೇಕು ಎಂಬುದು ಚರ್ಚೆಯ ವಿಷಯವಾಗಿತ್ತು,ಜೈಲಿಗೆ ಅವಿನಾಶ್ ಹೆಸರನ್ನು ಸೂಚಿಸಿದ್ದೇ ತಡ ಸ್ಪರ್ಧಿಗಳ ನಡುವೆ ವಾಗ್ವಾದ ನಡೆದು ನಂತರ ಅದು ಉಲ್ಭಣಗೊಂಡಿದೆ.ಅವಿನಾಶ್‌ ಅಕ್ರಾಮಣಕಾರಿ ವರ್ತನೆಯ ನಂತರ ಮನೆ ಮಂದಿ ಆತನನ್ನು ಮನೆಯಿಂದ ಹೊರಹಾಕಲು ಹೆಸರು ಸೂಚಿಸಿದ್ದಾರೆ.ಪ್ರೋಮೋದಲ್ಲಿ ತೋರಿಸಿದಂತೆ ಅವಿನಾಶ್‌ ಉಳಿದ ಸ್ಪರ್ಧಿಗಳನ್ನು ಹಗ್‌ ಮಾಡಿ ಮನೆಯಿಂದ ಹೊರ ಹೋಗಿದ್ದಾರೆ.

Edited By : Somashekar
PublicNext

PublicNext

16/10/2024 06:39 pm

Cinque Terre

7.96 K

Cinque Terre

3

ಸಂಬಂಧಿತ ಸುದ್ದಿ