ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಬಾ ಸಿದ್ದಿಕ್ ನಿಧನದ ನಂತರ ಸಲ್ಮಾನ್‌ ಗೆ ಟೈಟ್‌ ಸೆಕ್ಯೂರಿಟಿ, ಅಪಾರ್ಟ್‌ಮೆಂಟ್‌ನ ಸುತ್ತಮುತ್ತ ನೋ ಎಂಟ್ರಿ

ಕಾಂಗ್ರೆಸ್ ನಾಯಕ ಬಾಬಾ ಸಿದ್ದಿಕ್ ನಿಧನದ ನಂತರ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬ ಸದಸ್ಯರ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಬಾಂದ್ರಾದಲ್ಲಿರುವ ನಟನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಸುತ್ತಮುತ್ತಲಿನ ಪ್ರದೇಶವು ಜನರ ಓಡಾಟವಿಲ್ಲದೇ ಬಿಕೋ ಎನ್ನುತ್ತಿದೆ.ಅಪಾರ್ಟ್‌ಮೆಂಟ್‌ಗಳ ಒಳಗೆ ಪ್ರವೇಶ,ಸೆಲ್ಫಿ,ವೀಡಿಯೊ,ಮಾಧ್ಯಮ ಸಿಬ್ಬಂದಿಗೆ ಸಹ ಆ ಪ್ರದೇಶದಲ್ಲಿ ಚಿತ್ರೀಕರಣ ಮಾಡಲು ಯಾವುದೇ ಅನುಮತಿ ಇಲ್ಲ. ವರದಿಗಳ ಪ್ರಕಾರ, ಎನ್‌ಸಿಪಿ ನಾಯಕನ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಹಿಸಿಕೊಂಡಿತ್ತು.ಈ ಗ್ಯಾಂಗ್‌ ನ ಲಿಸ್ಟ್‌ ನಲ್ಲಿ ಸಲ್ಮಾನ್ ಖಾನ್, ಮುನಾವರ್ ಫರುಕಿ ಮತ್ತು ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ ಅವರ ಮ್ಯಾನೇಜರ್ ಶಗನ್‌ಪ್ರೀತ್ ಸಿಂಗ್ ಅವರ ಹೆಸರುಗಳು ಟಾರ್ಗೇಟ್‌ ಲಿಸ್ಟ್‌ ಅಲ್ಲಿ ಸೇರಿವೆ. ಸಲ್ಮಾನ್‌ನ ಭದ್ರತೆಯನ್ನು Y+ ಗೆ ಅಪ್‌ಗ್ರೇಡ್ ಮಾಡಲಾಗಿದೆ.ಯಾರಾದರೂ ಸಲ್ಮಾನ್ ಖಾನ್ ಅಥವಾ ದಾವೂದ್ ಗ್ಯಾಂಗ್‌ಗೆ ಸಹಾಯ ಮಾಡಿದ್ರೆ ಅವರಿಗೂ ಇದೇ ಗತಿ ಎಂದು ಏಚ್ಚರಿಗೆ ನೀಡಿದೆ ಬಿಷ್ಣೋಯ್‌ ಗ್ಯಾಂಗ್.‌

Edited By : Somashekar
PublicNext

PublicNext

16/10/2024 06:34 pm

Cinque Terre

12.04 K

Cinque Terre

4

ಸಂಬಂಧಿತ ಸುದ್ದಿ