ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ನಿವೇಶನ ಹಂಚಿಕೆ ವಿಳಂಬ, ಅಧಿಕಾರಿಗಳ ಅಮಾನತಿಗೆ ಗ್ರಾಮಸ್ಥರ ಆಗ್ರಹ

ಚಿತ್ರದುರ್ಗ: ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ .

ಚಳ್ಳಕೆರೆ ತಾಲೂಕಿನ ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ಎಸ್.ಸಿ ಕಾಲೋನಿಗೆ ಹೊಂದಿಕೊಂಡ 5 ಎಕರೆ 1986 ರಿಂದ ಇಲ್ಲಿಯವರೆಗೂ ಅನುಭೋಗ ಹೊಂದಿದ್ದು, ಜಿಲ್ಲಾಧಿಕಾರಿಗಳು ಮಂಜೂರು ಮಾಡಿ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ಹಂಚಿಕೆ, ಹಕ್ಕುಪತ್ರ ನೀಡಲು ಕ್ರಮವಹಿಸಲು ಆದೇಶಿಸಿರುತ್ತಾರೆ. ಅಂದಿನಿಂದ ಇಂದಿನವರೆಗೂ ಕೂಡ ಮನೆ ಹಂಚಿಕೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಗ್ರಹಿಸಿ ಪ್ರತಿಭಟಿಸಿದ್ದಾರೆ.

ಪಿ.ಡಿ.ಒ ಮತ್ತು ಕಾಯದರ್ಶಿಯವರು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಕಾರ್ಯದರ್ಶಿ, ಬಿಲ್‌ ಕಲೆಕ್ಟ‌ರ್ ಹಾಗೂ ಕಾರ್ಯದರ್ಶಿಯವರು ವಾರದಲ್ಲಿ 3 ದಿನ ಕೆಲಸ ಮಾಡುತ್ತಾರೆ. ಬುಧವಾರ- ಗುರುವಾರ-ಶುಕ್ರವಾರದ ಮಧ್ಯಾಹ್ನ ಅವರ ಊರಾದ ಬೆಂಗಳೂರಿಗೆ ಹೋದವರು ಮತ್ತೆ ಬುಧವಾರ ವಾಪಾಸ್ ಬರುತ್ತಾರೆ. ಯಾಕೆ ಸರ್ 3 ದಿನ ಬರಲಿಲ್ಲ ಎಂದು ಕೇಳಿದರೆ ಪ್ರತಿಬಾರಿಯೂ ಸಹ ನಮ್ಮವರು ತೀರಿ ಹೋಗಿದ್ದರು ಅಂತ ಸಬೂಬು ಉತ್ತರ ಹೇಳ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನಿವೇಶನ ಹಂಚಿಕೆ ಮಾಡದೆ ವಿಳಂಬ ಮತ್ತು ನಿರ್ಲಕ್ಷ್ಯ ನೀತಿ ಅನುಸರಿಸುತ್ತಿರುವ ತಿಮ್ಮಪ್ಪಯ್ಯನಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆ‌ರ್. ಶ್ರೀನಿವಾಸ ಮತ್ತು ಕಾರ್ಯದರ್ಶಿ ನಾಗರಾಜನಾಯ್ಕ ಬಿ ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಪ್ರತಿಭಟಿಸಿದ್ದಾರೆ.

Edited By : Nagesh Gaonkar
PublicNext

PublicNext

16/10/2024 06:05 pm

Cinque Terre

17.42 K

Cinque Terre

0

ಸಂಬಂಧಿತ ಸುದ್ದಿ