ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: 8700 ಹೆಕ್ಟೇರ್ ಬೆಳೆ ಹಾನಿ - ಪರಿಹಾರಕ್ಕೆ ಅನ್ನದಾತನ ಅಲೆದಾಟ

ಕುಂದಗೋಳ: ಕಳೆದ ಅಕ್ಟೋಬರ್ 1ರಿಂದ 13 ರವರೆಗೆ ಸುರಿದ ಮಳೆಯ ಅಟ್ಟಹಾಸಕ್ಕೆ ಹಳ್ಳ ಕೊಳ್ಳ ತುಂಬಿ ಹರಿದು ರೈತರ ಜಮೀನುಗಳು ಜಲಾವೃತವಾಗಿ ಬೆಳೆಗಳು ನಷ್ಟವಾಗಿದೆ.

ಪ್ರಸ್ತುತ ಅಕ್ಟೋಬರ್ ತಿಂಗಳಲ್ಲಿ ಕುಂದಗೋಳ ತಾಲೂಕಿನ ಎಲ್ಲೆಡೆ 180 ಮಿಲಿ ಮೀಟರ್‌ ಮಳೆಯಾಗಿದ್ದು, ವಾಡಿಕೆಗಿಂತ ಮೆಳಯು ಶೇಕಡಾ 166 ಅಧಿಕವಾಗಿದೆ. ಪರಿಣಾಮ 5200 ಹೆಕ್ಟೇರ್ ಹತ್ತಿ, 1500 ಹೆಕ್ಟೇರ್ ಶೇಂಗಾ, 2000 ಹೆಕ್ಟೇರ್ ಗೋವಿನಜೋಳ ಬೆಳೆ ಸೇರಿ ಒಟ್ಟು 8700 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕುಂದಗೋಳ ಸಹಾಯಕ ಕೃಷಿ ನಿರ್ದೇಶಕ ಕಾರ್ಯಾಲಯ ಮಾಹಿತಿ ನೀಡಿದೆ.

ಸದ್ಯ ಬೆಳೆ ಕಳೆದುಕೊಂಡ ರೈತರು ಕೃಷಿ ಇಲಾಖೆಗೆ ದಾವಿಸಿ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಮುಖ್ಯವಾಗಿ ಬೆಣ್ಣೆ ಹಳ್ಳ, ಗೂಗಿ ಹಳ್ಳ ಅಕ್ಕಪಕ್ಕದ ಜಮೀನುಗಳಲ್ಲಿ ಹೆಚ್ಚಿನ ಹಾನಿಯಾಗಿದ್ದು, ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿ ಬೆಳೆಯಲ್ಲಿ ನೀರು ಸಂಗ್ರಹವಾಗಿ ಕೃಷಿ ಕಾಯಕವೇ ತಟಸ್ಥವಾಗಿದೆ. ಒಟ್ಟಾರೆ ಅತಿವೃಷ್ಟಿ ಆಟಾಟೋಪಕ್ಕೆ ರೈತರ ಬದುಕು ನೆಲಕಚ್ಚಿ ಬೆಳೆ ವಿಮೆ, ಬೆಳೆ ಪರಿಹಾರಕ್ಕಾಗಿ ರೈತರು ಮನವಿ ಇಟ್ಟಿದ್ದಾರೆ. ಈ ಬಗ್ಗೆ ಸಂಬಂಧ ರಾಜ್ಯ ಸರ್ಕಾರ ಹಾಗೂ ಜಂಟಿ ನಿರ್ದೇಶಕರು ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ.

-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

16/10/2024 04:13 pm

Cinque Terre

39.47 K

Cinque Terre

0

ಸಂಬಂಧಿತ ಸುದ್ದಿ