ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ತುಳಸಿ ಗಿಡದಲ್ಲಿ ಅರಳಿದ ದಾಸವಾಳ ಹೂವು - ಹೀಗೊಂದು ಕೌತುಕ

ಸುಳ್ಯ: ತುಳಸಿ ಗಿಡದಲ್ಲಿ ದಾಸವಾಳ ಹೂವು ಅರಳಿದ್ದು, ಹೀಗೊಂದು ಕೌತುಕ ಸುಳ್ಯ ಸಮೀಪದ ಅಜ್ಜಾವರದ ಶಾಂತಿಮಜಲಿನ ಮನೆಯ ಅಂಗಳದಲ್ಲಿ ಕಂಡು ಬಂದಿದೆ.

ಅಜ್ಜಾವರ ಗ್ರಾಮದ ಶಾಂತಿಮಜಲಿನ ಭವಾನಿ ಎಂಬವರ ಮನೆಯಂಗಳದ ತುಳಸಿ ಗಿಡದಲ್ಲಿ ದಾಸವಾಳ ಹೂವು ಅರಳಿದೆ. ಈಗಾಗಲೇ 3 ದಾಸವಾಳ ಹೂವುಗಳು ಅರಳಿ ನಿಂತಿದೆ. ತುಳಸಿ ಗಿಡದ ದಾಸವಾಳ ನೋಡುಗರಲ್ಲಿ ಕುತೂಹಲ ಮೂಡಿಸುತ್ತಿದೆ.

ತುಳಸಿ ಗಿಡದಲ್ಲಿ ಇನ್ನೂ ಕೂಡ ಹೂವಿನ ಮೊಗ್ಗು ಇದ್ದು ಇನ್ನಷ್ಟು ದಾಸವಾಳಗಳು ಅರಳುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಗಿಡ ಕಸಿ ಮಾಡಿದರೆ ಈ ರೀತಿ ಸಂಭವಿಸಬಹುದು. ಆದರೆ ಇವರೇನು ಹಾಗೆ ಕಸಿ ಕಟ್ಟಿಲ್ಲ. ತನ್ನಷ್ಟಕೇ ಈ ವಿಸ್ಮಯ ಕಂಡು ಬಂದಿದೆ ಎನ್ನುತ್ತಾರೆ ಮನೆಯವರಾದ ಭವಾನಿ. ತುಳಸಿ ಗಿಡದ ಸಮೀಪದಲ್ಲಿಯೇ ದಾಸವಾಳ ಹೂವಿನ ಗಿಡಗಳು ಇದ್ದು, ತುಳಸಿ ಗಿಡ ಹಾಗೂ ದಾಸವಾಳ ಪರಾಗ ಸ್ಪರ್ಶ ಆಗಿರುವ ಕಾರಣ ಈ ರೀತಿಯ ವಿಸ್ಮಯ ಉಂಟಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ. ತುಳಸಿ ಗಿಡದಲ್ಲಿ ದಾಸವಾಳ ಅರಳಿರುವುದನ್ನು ನೋಡಲು ಹಲವು ಮಂದಿ ಕುತೂಹಲಿಗರು ಆಗಮಿಸುತ್ತಿದ್ದಾರೆ.

Edited By : Suman K
PublicNext

PublicNext

16/10/2024 12:48 pm

Cinque Terre

22.98 K

Cinque Terre

4

ಸಂಬಂಧಿತ ಸುದ್ದಿ