ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ದತ್ತ ಮಾಲಾ ಅಭಿಯಾನ ಹಿನ್ನೆಲೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವ ಭಾವಿ ಸಭೆ

ಚಿಕ್ಕಮಗಳೂರು: ನವೆಂಬರ್ 04 ರಿಂದ ನವೆಂಬರ್ 10 ರವರೆಗೆ ನಡೆಯಲಿರುವ ದತ್ತ ಮಾಲಾ ಅಭಿಯಾನವನ್ನು ಶಾಂತಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ದತ್ತ ಮಾಲಾ ಅಭಿಯಾನದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದತ್ತ ಪೀಠಕ್ಕೆ ದರ್ಶನಕ್ಕೆ ಹೋಗುವ ಸಮಯ ಹಾಗೂ ಬರುವ ಸಮಯವನ್ನು ತಿಳಿಸಲಾಗುವುದು. ಗಿರಿಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಈಗಾಗಲೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದ ಅವರು ಕವಿಕಲ್ ಗಂಡಿ ಹತ್ತಿರ ರಸ್ತೆ ದುರಸ್ತಿಯಲ್ಲಿರುವುದರಿಂದ ಲಾಂಗ್ ಚಾರ್ಸಿ ವಾಹನಗಳು ಬರಲು ಸಾಧ್ಯವಾಗುವುದಿಲ್ಲ ಆದ್ದರಿಂದ ಮಿನಿ ಬಸ್‌ಗಳ ವ್ಯವಸ್ಥೆ ಮಾಡಲು ಆರ್ ಟಿ ಒ ಅಧಿಕಾರಿಗೆ ತಿಳಿಸಿದ ಅವರು ವಾಹನಗಳ ದಟ್ಟಣೆ ಉಂಟಾಗುವುದರಿಂದ ಲಾಂಗ್ ಚಾರ್ಸಿ ವಾಹನಗಳನ್ನು ಬಳಸದಂತೆ ಹೇಳಿದರು.

ಬೇರೆ ಜಿಲ್ಲೆಗಳಿಂದ ದತ್ತ ಮಾಲಾಧಾರಿಗಳು ಯಾರ ನೇತೃತ್ವದಲ್ಲಿ ಬರುತ್ತಾರೆ, ಭಕ್ತಾಧಿಗಳು ಉಳಿಯುವ ಸ್ಥಳ, ಹೊರ ರಾಜ್ಯಗಳಿಂದ ಬರುವವರ ಮಾಹಿತಿಯನ್ನು ಮೊದಲೇ ಪೊಲೀಸ್ ಇಲಾಖೆಗೆ ತಿಳಿಸಬೇಕು. ಪೀಠದೊಳಗೆ ಯಾರು ಕೂಡ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ ಹಾಗೂ ಪೋಟೋ ತೆಗೆಯುವಂತಿಲ್ಲ. ಪೊಲೀಸ್ ಇಲಾಖೆಯಿಂದ ಸುರಕ್ಷತಾ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ತಿಳಿಸಿದರು.

Edited By : Vijay Kumar
Kshetra Samachara

Kshetra Samachara

14/10/2024 09:41 pm

Cinque Terre

3.06 K

Cinque Terre

0

ಸಂಬಂಧಿತ ಸುದ್ದಿ