ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ತರಕಾರಿ ಮಾರುಕಟ್ಟೆ ಸ್ಥಗಿತಗೊಳಿಸಿದ ಕ್ರಮ ಖಂಡಿಸಿ ನಾಳೆ ಸಂಕೇಶ್ವರ ಪಟ್ಟಣ ಬಂದ್‌ಗೆ ಕರೆ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದ ದುರದುಂಡೇಶ್ವರ ತರಕಾರಿ ಮಾರುಕಟ್ಟೆ ಸ್ಥಗಿತಗೊಳಿಸಿದ ಕ್ರಮ ಖಂಡಿಸಿ ಇದೇ ಮಂಗಳವಾರ ಅ.15 ರಂದು ಸ್ವಯಂ ಘೋಷಿತ ಸಂಕೇಶ್ವರ ಬಂದ್‌ಗೆ ಕರೆ ನೀಡಲಾಗಿದೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ನಾಗರಿಕ ಸಲಹಾ ಸಮಿತಿ, ವಿವಿಧ ವ್ಯಾಪಾರಸ್ಥರ ಸಂಘಟನೆಗಳ ಸಭೆಯಲ್ಲಿ ದುರದುಂಡೇಶ್ವರ ತರಕಾರಿ ಮಾರುಕಟ್ಟೆ ಸ್ಥಗಿತಕ್ಕೆ ತಾಲೂಕು ಮತ್ತು ಜಿಲ್ಲಾಡಳಿತ ತರಾತುರಿ ಮತ್ತು ಏಕಪಕ್ಷೀಯ ನಿರ್ಧಾರವೇ ಕಾರಣವಾಗಿದ್ದು ಇದನ್ನು ಖಂಡಿಸಿ ಅ. 15 ರಂದು ಸ್ವಯಂ ಘೋಷಿತ ಸಂಕೇಶ್ವರ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಕಾನೂನು ಬದ್ಧ ನೋಟಿಸ್‌ ಮತ್ತು ಮುನ್ಸೂಚನೆ ನೀಡದೇ ಸಂಕೇಶ್ವರದ ದುರದುಂಡೇಶ್ವರ ಆವರಣದ ತರಕಾರಿ ಮಾರುಕಟ್ಟೆಯನ್ನು ಏಕಾಏಕಿ ಸ್ಥಗಿತಗೊಳಿಸಿದೆ. ಇದರೊಂದಿಗೆ ಪಕ್ಕದ ನೆರೆಯ ಮಹಾರಾಷ್ಟದ ಮುತ್ನಾಳದಲ್ಲಿ ಮಾರುಕಟ್ಟೆ ಆರಂಭಕ್ಕೆ ಅಪರೋಕ್ಷ ನೆರವು ನೀಡಿ ಕರ್ನಾಟಕದ ಆದಾಯವನ್ನು ನಷ್ಟ ಮಾಡಿದೆ ಎಂದು ಹೋರಾಟಗಾರರು ದೂರಿದ್ದಾರೆ.

Edited By : Manjunath H D
PublicNext

PublicNext

14/10/2024 07:21 pm

Cinque Terre

22.07 K

Cinque Terre

0

ಸಂಬಂಧಿತ ಸುದ್ದಿ