ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 2 ಎ ಮೀಸಲಾತಿಗಾಗಿ ಅ.18 ರಂದು ಬೆಂಗಳೂರಿನಲ್ಲಿ ಸೇರಲು ಮನವಿ ಮಾಡಿದ ಶ್ರೀಗಳು

ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ನೀಡಿದ ಮಾತಿನಂತೆ ನಮ್ಮ ಸಮಾಜದವರೊಂದಿಗೆ ಸಭೆ ನಡೆಸಬೇಕೆಂದು ಇಲ್ಲದಿದ್ದರೆ ಅ.18 ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಕುಳಿತುಕೊಳ್ಳಲಾಗುವುದು ಅದಕ್ಕಾಗಿ ಪಂಚಮಸಾಲಿ ಸಮಾಜದ ಬಾಂಧವರು ಆಗಮಿಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇಂದು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅ.18 ರಂದು ಪಂಚಮಸಾಲಿಯ ಎಲ್ಲ ಸಮಾಜದ ಪದಾಧಿಕಾರಿಗಳು ಬೆಂಗಳೂರಿಗೆ ಆಗಮಿಸಬೇಕು. ಮುಖ್ಯಮಂತ್ರಿಗಳು ದೆಹಲಿಗೆ ಹೋಗಿ ಬಂದ ಮೇಲೆ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವ ಕುರಿತು ಸಭೆ ನಡೆಸಲು ದಿನಾಂಕ ಮತ್ತು ಸ್ಥಳ ನಿಗದಿ ಪಡಿಸಬೇಕು. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಏಳು ಹಂತದಲ್ಲಿ ಹೋರಾಟ ಮಾಡಲಾಗಿದೆ. ಆದರೆ ಕಳೆದೊಂದು‌ ವರ್ಷದಿಂದ ಸರಕಾರದಿಂದ ನಮ್ಮ‌ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೆ.22 ರಂದು ವಕೀಲರ ರಾಜ್ಯಮಟ್ಟದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅ‌ .15ಕ್ಕೆ ದೂರವಾಣಿ ಕರೆ ಮಾಡಿ ಸಭೆ ನಡೆಸುವುದಾಗಿ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಗಳು ಆಗಮಿಸಿ ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಹೋರಾಟ ಹಿಂಪಡೆದಿದ್ದೆವು, ಸಿಎಂ ಕಚೇರಿಯಿಂದ ಇಲ್ಲಿಯವರೆಗೂ ಯಾವುದೇ ಸಭೆಯ ಕುರಿತು ಮಾಹಿತಿ ಬಂದಿಲ್ಲ. ಮುಖ್ಯಮಂತ್ರಿಗಳು ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದರು.

Edited By : Manjunath H D
PublicNext

PublicNext

14/10/2024 05:18 pm

Cinque Terre

22.68 K

Cinque Terre

0

ಸಂಬಂಧಿತ ಸುದ್ದಿ