ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ನಗರದಲ್ಲಿ ಹೆಚ್ಚಾದ ವ್ಹೀಲಿಂಗ್ ಪುಂಡರ ಹಾವಳಿ

ಹಾಸನ : ನಗರದಲ್ಲಿ ವೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಾ ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ.

ಹಗಲು, ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ, ನಗರದ ಪ್ರಮುಖ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿರುವ ಅಪ್ರಾಪ್ತ ಯುವಕರು, ವೀಲಿಂಗ್ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿ ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ.

ಅಫುಜ಼್, ರುವೇಜ಼್, ಸಯ್ಯದ್ ಮಸೂದ್ ಎಂಬುವವರ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ವೀಲಿಂಗ್ ಮಾಡಿರುವ ವಿಡಿಯೋ ಜೊತೆಗೆ ತನ್ನ ಫೋಟೋ ಜೊತೆಗೆ ದಾವುದ್ ಫೋಟೋ ಅಪ್‌ಲೋಡ್ ಮಾಡಿದ್ದಾರೆ. ವ್ಹೀಲಿಂಗ್ ಪುಂಡರ ಹಾವಳಿಗೆ ಬೇಸತ್ತ ವಾಹನ ಸವಾರರು, ಕೂಡಲೇ ವ್ಹೀಲಿಂಗ್ ಹಾವಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.

Edited By : Somashekar
PublicNext

PublicNext

14/10/2024 12:17 pm

Cinque Terre

22.99 K

Cinque Terre

0

ಸಂಬಂಧಿತ ಸುದ್ದಿ