ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳಿಯಾಳ: ಇದು ಬಸ್ ಅಲ್ಲ ಹೊಗೆ ಕಾರುವ ಹಳೆ ರೈಲು

ಹಳಿಯಾಳ: ಈ ಸಾರಿಗೆ ಬಸ್‌ನ ಒಮ್ಮೆ ಚೆಂದಗ ನೋಡ್ರಿ.. ಬಸ್‌ ಹೆಂಗ್ ಹೊಗಿ ಉಗುಳಾಕತೈತಿ. ಪಾಪ ನಮ್ ಜನಾ ಹೆಂಗ್ ಉಸಿರಾಡಬೇಕ ಹೇಳ್ರಿ ನೀವ. ಈ ಹೊಗಿಯಿಂದ ಹಿಂದ ಮುಂದ ಜನರು ಹೋಗಲಾರದಂಗ ಆಗೇತಿ.

ಅಂದಂಗ ಇದು ಯಾವುದೋ ಗುಜರಿಗೆ ಹಾಕುವಂಥ ಬಸ್ ಅಲ್ಲ. ಬದಲಾಗಿ ಹಳಿಯಾಳ ಘಟಕದ ತಡೆರಹಿತ ಬಸ್ ಇದು. ಪ್ರತಿದಿನಾ ನೂರಾರು ಪ್ರಯಾಣಿಕರನ್ನು ಹೊತ್ಕಂಡು ಪ್ರಯಾಣ ಮಾಡುವಂತ ಡಕೋಟಾ ಬಸ್ ನೋಡ್ರಿ ಇದು.

ಈಗಾಗಲೇ ನಮ್ ಸರ್ಕಾರದ ಶಕ್ತಿ ಯೋಜನೆಯಿಂದ ಎಲ್ಲ ಬಸ್ಸುಗಳು ಜನಜಂಗುಳಿಯಿಂದ ತುಂಬಿ ತುಳುಕಾಕತ್ತಾವು... ಸಂದಿ ಗೊಂದ್ಯಾಗ ಜಾಗ ಇಲ್ಲದಷ್ಟ ಜನ ಬಸ್‌ನ್ಯಾಗ ಪ್ರಯಾಣ ಮಾಡಾಕತ್ತಾರ.. ಇಂತಾದ್ರಾಗ ದೂರದ ಊರಿಗೆ ಇಂತಾ ಬಸ್‌ಗಳನ್ನು ಬಿಡುತ್ತಿರುವ ಸಾರಿಗೆ ಅಧಿಕಾರಿಗಳು... ನಡುವ ಏನಾದರೂ ಬಸ್ ಕೆಟ್ಟು ನಿಂತರ ಯಾರು ಹೊಣೆ ನೀವ ಹೇಳಿ...? ಮೊದಲ ಬಸ್‌ಗಳು ಕೊರತೆ ಕೂಡಾ ಹೆಚ್ಚಾಗಿದ್ದ ಸಮಸ್ಯೆ ಆದ್ರ ಈ ಅಧಿಕಾರಿಗಳು ಏನೂ ಮಾಡಾಕ್ತತಾರ ಅಂತ ಸಾರ್ವಜನಿಕರು ಸಾರಿಗೆ ಇಲಾಖೆಯ ವಿರುದ್ಧ ಸಿಟ್ಟಿಗೆದ್ದಾರ. ಕೂಡಲೆ ಅಧಿಕಾರಿಗಳು ಇಂತಾ ಡಕೋಟಾ ಬಸ್‌ ತಗೆದು ಬ್ಯಾರೆ ಬಸ್ ಬಿಡ್ರಿ. ಈ ಹೊಗಿಯಿಂದ ಜನಕ್ಕೂ ತುಂಬಾ ತೊಂದ್ರೆ ಆಗಾಕತ್ತೇತಿ.

ಮಾಲಿನ್ಯ ಪ್ರಮಾಣಪತ್ರ ಇಲ್ಲದೇ ಇದ್ದರೆ ವಾಹನ ಮಾಲೀಕನಿಗೆ ಭಾರಿ ದಂಡ ವಿಧಿಸುತ್ತಾರೆ. ಆದರೆ, ರಾಜ್ಯ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಈ ನಿಯಮ ಅನ್ವಯಿಸುದಿಲ್ಲವೇ ಏಕೆ ಎಂದು ಯುವ ಮುಖಂಡ ಸಚಿನ್ ಬಿರ್ಜೆ ಪ್ರಶ್ನಿಸುತ್ತಿದ್ದಾರೆ‌.

Edited By : Nagesh Gaonkar
PublicNext

PublicNext

13/10/2024 07:01 pm

Cinque Terre

32.38 K

Cinque Terre

3

ಸಂಬಂಧಿತ ಸುದ್ದಿ