ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: "ರಮೇಶ ಜಾರಕಿಹೊಳಿ ನನ್ನನ್ನು ಒಪ್ಪಲು ಇನ್ನೂ ಸಮಯ ಬೇಕು"- ವಿಜಯೇಂದ್ರ

ಬೆಳಗಾವಿ: ನಾವು ವಿರೋಧ ಪಕ್ಷದಲ್ಲಿದ್ದೇವೆ, ಸಿಎಂ ಯಾರೆಂಬುದು ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ‌ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ ಎಂದು ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.‌

ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ವಿಜಯೇಂದ್ರ, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ A1 ಆರೋಪಿ ಆಗಿದ್ದಾರೆ. ಎ1 ಅಂದ್ರೆ ಅಭಿವೃದ್ಧಿ ನಂಬರ್ 1 ಅಲ್ಲ, ಆರೋಪಿ ನಂಬರ್ ಎಂದು ವ್ಯಂಗ್ಯವಾಡಿದರು.‌

ಸಚಿವ ಸತೀಶ್ ಜಾರಕಿಹೊಳಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ರಮೇಶ್ ಜಾರಕಿಹೊಳಿ ಸಿಗಲಿಲ್ಲ. ಹೀಗಾಗಿ ಸತೀಶ್ ಜಾರಕಿಹೊಳಿ ಭೇಟಿಯಾದೆ. ರಮೇಶ ಜಾರಕಿಹೊಳಿ ನನ್ನನ್ನು ಒಪ್ಪಲು ಇನ್ನೂ ಸಮಯ ಬೇಕು. ಸಿದ್ದರಾಮಯ್ಯ ‌ಸಲಹೆ ಕೇಳಿಲ್ಲ, ಕೇಳಿದ್ರೆ ಕೊಡ್ತಿದ್ದೆ. ನಾನು ಡಿಕೆಶಿ ಜೊತೆ ಹೊಂದಾಣಿಕೆ ‌ಮಾಡಿಕೊಂಡಿಲ್ಲ. ನಾನು ಯಡಿಯೂರಪ್ಪನವರ ಮಗ, ಓಡಿ ಹೋಗಲ್ಲ.

ನಮ್ಮ ನಾಯಕರ ಸಲಹೆ ಕೇಳ್ತಿನಿ‌. ಬಿಜೆಪಿ ಅಧಿಕಾರಕ್ಕೆ ತರುವುದೇ ನನ್ನ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇನೆ. ಈಶ್ವರಪ್ಪರನ್ನು ಪಕ್ಷಕ್ಕೆ ಕರೆತರುವ ಪ್ರಸ್ತಾಪ ಸದ್ಯಕ್ಕೆ ಪಕ್ಷದ ಮುಂದೆ ಇಲ್ಲ ಎಂದು ತಿಳಿಸಿದರು.

Edited By : Shivu K
PublicNext

PublicNext

10/10/2024 07:51 pm

Cinque Terre

29.5 K

Cinque Terre

0

ಸಂಬಂಧಿತ ಸುದ್ದಿ