ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜರ್ಮನ್ ಯುವತಿಯ ಕನ್ನಡ ಪ್ರೇಮ

ಬೆಂಗಳೂರು: ಕರ್ನಾಟಕದಲ್ಲೇ ಇದ್ದು ಕನ್ನಡ ಮಾತನಾಡಲು ಹಿಂಜರಿಯುವ ಕೊಳಕು ಮನಗಳ ಮಧ್ಯೆ ವಿದೇಶಿ ಯುವತಿಯೊಬ್ಬರ ಕನ್ನಡ ಭಾಷಾ ಪ್ರೇಮ ಕನ್ನಡಿಗರ ಮನಸ್ಸು ಕದ್ದಿದೆ.

ನಗರದ ಕೆ ಆರ್ ಮಾರುಕಟ್ಟೆಯಲ್ಲಿ ಯುವತಿ ವ್ಯಾಪಾರಿಯೊಬ್ಬರೊಂದಿಗೆ ಮಾತನಾಡುವ ವಿಡಿಯೋ ವೈರಲ್ ಆಗುತ್ತಿದೆ. ಮೂಲತಃ ಜರ್ಮನಿ ಅವರಾದರೂ ಕನ್ನಡ ಸ್ಪಷ್ಟವಾಗಿ ಮಾತನಾಡಿರುವ ಯುವತಿ ಬೆಂಗಳೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಿನ್ನೂ ಕನ್ನಡ ಭಾಷೆ ಕಲಿಯುತ್ತಿದ್ದೇನೆ ಎನ್ನುವ ಆಕೆಯ ಕಂಗಳಲ್ಲಿ ಕನ್ನಡ ಪ್ರೇಮ ಎದ್ದು ಕಾಣುತ್ತದೆ. ಕೊನೆ ಪಕ್ಷ ಈಗಲಾದರೂ ಈ ನೆಲದಲ್ಲಿದ್ದು ಕನ್ನಡಿಗರ ಕನ್ನಡ ಭಾಷೆ ತುಚ್ಛವಾಗಿ ಕಾಣುವ ತುಚ್ಛ ಮನಸ್ಥಿತಿ ಅವರು ಬುದ್ಧಿ ಕಲಿಯಬೇಕಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.

Edited By : Shivu K
PublicNext

PublicNext

10/10/2024 12:51 pm

Cinque Terre

22.84 K

Cinque Terre

0