ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಲಿಕಾನ್ ಸಿಟಿಗೆ ವಾಹನ ದಟ್ಟಣೆ ನಗರವೆಂಬ ಹಣೆಪಟ್ಟಿ

ಬೆಂಗಳೂರು : ಭಾರತದ ಟ್ರಾಫಿಕ್‌ ಕ್ವಾಲಿಟಿ ಇಂಡೆಕ್ಸ್ TQI ವರದಿಯ ಪ್ರಕಾರ ಮತ್ತೊಮ್ಮೆ ಬೆಂಗಳೂರು ಭಾರತದ ಅತ್ಯಂತ ಟ್ರಾಫಿಕ್ ಹೊಂದಿರುವ ನಗರವಾಗಿ ಹೊರಹೊಮ್ಮಿದೆ. ಇತ್ತೀಚಿನ ಟ್ರಾಫಿಕ್ ಕ್ವಾಲಿಟಿ ಇಂಡೆಕ್ಸ್ ಪ್ರಕಾರ ಬೆಂಗಳೂರು ಭಾರತದ ಅತ್ಯಂತ ದಟ್ಟಣೆಯ ನಗರ ಎಂಬ ಹಣೆಪಟ್ಟಿ ಪಡೆದಿದೆ.

ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಸ್ವಲ್ಪ ಟ್ರಾಫಿಕ್ ಪರಿಹಾರವನ್ನು ಕಂಡಿದೆ. ಮೋಹನ್‌ ದಾಸ್ ಪೈ ಅವರು ನಗರದ ದೀರ್ಘಾವಧಿಯ ಟ್ರಾಫಿಕ್‌ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲು "ಡಿಜಿಟಲ್ ಅವಳಿ" ಅನ್ನು ಸೂಚಿಸಿದ್ದಾರೆ.

ಡೆಕ್ಕನ್ ಹೆರಾಲ್ಡ್ ಪ್ರಕಟಿಸಿರುವ TQI ವರದಿ 800 ರಿಂದ 1,000 ವರೆಗಿನ ''ತೀವ್ರ ದಟ್ಟಣೆ" ವಿಭಾಗದಲ್ಲಿ ಬೆಂಗಳೂರು ಆತಂಕಕಾರಿಯಾಗಿ ಹೆಚ್ಚಿನ ಅಂಕಗಳನ್ನು ಗಳಿಸಿದೆ. ಈ ವರದಿಯ ಪ್ರಕಾರ, ಮುಂಬೈ 787 ಅಂಕಗಳೊಂದಿಗೆ ಬೆಂಗಳೂರಿಗಿಂತ ಸುಧಾರಿತ ಟ್ರಾಫಿಕ್ ವ್ಯವಸ್ಥೆ ಹೊಂದಿದೆ.

ಅತಿ ಹೆಚ್ಚು ಟ್ರಾಫಿಕ್ ಸಮಸ್ಯೆ ಹೊಂದಿರುವ ನಗರಗಳಲ್ಲಿ ಬೆಂಗಳೂರು ಅಗ್ರ ಸ್ಥಾನದಲ್ಲಿದ್ರೆ, ಆ ನಂತರ ಎರಡನೇ ಸ್ಥಾನದಲ್ಲಿ ಮುಂಬೈ ಇದ್ದು, ಕ್ರಮವಾಗಿ ದೆಹಲಿ ಮತ್ತು ಹೈದರಾಬಾದ್‌ ನಂತರದ ಸ್ಥಾನದಲ್ಲಿವೆ.

Edited By : Suman K
PublicNext

PublicNext

09/10/2024 01:45 pm

Cinque Terre

39.1 K

Cinque Terre

2

ಸಂಬಂಧಿತ ಸುದ್ದಿ