ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಬ್ಲೂ ಜಾವಾ ಬಾಳೆಹಣ್ಣು, ನೀಲಿ ಸುಂದರಿ ದೇಹಕ್ಕೆ ಬಲು ಉಪಕಾರಿ

ಇದೀಗ ಮಾರುಕಟ್ಟೆಯಲ್ಲಿ ಕಾಣಸಿಗುತ್ತಿದೆ ಬ್ಲೂ ಜಾವಾ ಬನಾನ.ಟಿಶ್ಯೂ ಕಲ್ಚರ್ಡ್ ಬಾಳೆ ಗಿಡಗಳ ರೂಪಾಂತರ ಇದಾಗಿದೆ.ಇದು ವಿಶಿಷ್ಟವಾದ ರುಚಿ ಮತ್ತು ಬಣ್ಣವನ್ನು ಹೊಂದಿದೆ. ನೀಲಿ ಜಾವಾ ಬಾಳೆಹಣ್ಣುಗಳು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿದೆ.ಸ್ನಾಯುಗಳ ಪುನರುತ್ಪಾದನೆ,ಸಕ್ಕರೆಯ ಮಟ್ಟ ಕಡಿಮೆ ಮಾಡಲು,ತೂಕ ನಷ್ಟವನ್ನು ಉತ್ತೇಜಿಸುವುದು, ನಿದ್ರಾಹೀನತೆಯನ್ನು ಕಡಿಮೆ ಮಾಡುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು, ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸುವಂತಹ ಬಹು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಈ ಬಾಳೆ ಹಣ್ಣಿನ ಮೂಲ ಸ್ಥಳ ಆಗ್ನೇಯ ಏಷ್ಯಾ.ವೆನಿಲ್ಲಾ ಐಸ್ ಕ್ರೀಂನಂತೆಯೇ ರುಚಿಯಿಂದಾಗಿ ಇದನ್ನು ವೆನಿಲ್ಲಾ ಬಾಳೆಹಣ್ಣು ಎಂದೂ ಕರೆಯುತ್ತಾರೆ.ನೀಲಿ ಜಾವಾ ಬಾಳೆ ಮರಗಳು 4.5 ರಿಂದ 6 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ.ನೆಟ್ಟ ನಂತರ ಸುಮಾರು 115 ರಿಂದ 150 ದಿನಗಳ ನಂತರ ಕೊಯ್ಲು ಮಾಡಬಹುದು. ಹಣ್ಣುಗಳು ಕಾಯಿ ಇದ್ದಾಗ ನೀಲಿ ಬಣ್ಣವಿದ್ದು,ಬಲಿತ ಮೇಲೆ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ.

Edited By : Somashekar
PublicNext

PublicNext

10/10/2024 08:28 pm

Cinque Terre

94.43 K

Cinque Terre

0

ಸಂಬಂಧಿತ ಸುದ್ದಿ