ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲೋಕಾಯುಕ್ತ ಮೆಟ್ಟಿಲೇರಿದ ಮರಕಡಿದ ಪ್ರಕರಣ

ಬೆಂಗಳೂರು: ಅಕ್ರಮವಾಗಿ ಮರ ಕಡಿದ ವಿಚಾರಕ್ಕೆ ಲೋಕಾಯುಕ್ತ ಕಛೇರಿಯಲ್ಲಿ ಅಪರೂಪದ ಪ್ರಕರಣ ದಾಖಲಾಗಿದೆ.

ಲಕ್ಷಾಂತರ ಬೆಲೆ ಬಾಳುವ 20 ಮರ ಕಡಿದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಹೋರಾಟಗಾರ ಡಿ.ಎನ್ ಚಂದರಶೇಖರ್ ಲೋಕಾಯುಕ್ತಗೆ ದೂರು ನೀಡಿದ್ದಾರೆ.

ಬಿದರಹಳ್ಳಿ ಹೋಬಳಿಯ ದೊಡ್ಡಗುಬಿಗೆ ಸೇರಿದ ಸರ್ಕಾರಿ ಜಮೀನನಲ್ಲಿ ಅಕ್ರಮವಾಗಿ ಮರ ಕಡಿದ ಮತ್ತು ಕಾಮಗಾರಿ ಆರೋಪ ಹಿನ್ನಲೆ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಎರಡು ಬಾರಿ ಆದೇಶ ಹೊರಡಿಸಿದ್ರು.ಆದ್ರೆ ಜಿಲಾಧಿಕಾರಿ ದಾರಿ ತಪ್ಪಿಸಿ ಆದೇಶ ಮಾಡಿರೋ ಆರೋಪ ಕೇಳಿಬಂದಿದೆ. ಸರ್ವೇ 106 ದೊಡ್ಡಗುಬ್ಬಿ ಗ್ರಾಮದ 3.16 ಗುಂಟೆ ಉದ್ಯಾನವನಕ್ಕಾಗಿ ಜಾಗವನ್ನ ಮಿಸಲಿಡಲಾಗಿತ್ತು. ಇದೀಗ ಇದೇ ಜಾಗದಲ್ಲಿ ಅಕ್ರಮವಾಗಿ ಕಾಮಗಾರಿ ಮಾಡಿರೋ ಆರೋಪ ಇದೆ. ಈ ಪ್ರದೇಶದಲ್ಲಿ ಉದ್ಯಾನವನ ಬಿಟ್ಟು ಬೇರೆ ಯಾವುದೇ ಕಾಮಾಗಾರಿ ಮಾಡ್ಬಾರದೆಂದು ಕೋರ್ಟ್ ಆದೇಶ ನೀಡಲಾಗಿತ್ತು.

ಆದ್ರೂ ಕೂಡ ದೊಡ್ಡಗುಬಿ ಪಿಡಿಓ ರೋಹಿತ, ಕಾರ್ಯದರ್ಶಿ ರವಿ, ಪಂಚಾಯ್ತಿ ಅಧ್ಯಕ್ಷ ಚಂದ್ರಪ್ಪ, ಸುಚಿತ್ರಾ ಸೇರಿ ಹಗರಣ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಇನ್ನು ಕೋರ್ಟ್ ಆದೇಶವನ್ನೇ ಮೀರಿ ಲಕ್ಷಾಂತರ ರೂಪಾಯಿ ಬೆಲೆಬಾಳುವ 20 ಮರಗಳನ್ನ ಕಡೆದು ಕಳ್ಳತನ ಮಾಡಿಸಿರೋ ಆರೋಪ ಇದೆ. ಈ ಹಿನ್ನೆಲೆ ಐವರು ಮೇಲೆ ಕಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತಗೆ ದೂರು ನೀಡಲಾಗಿದೆ. ಈ ಹಿಂದೆ ಪಿಡಿಓ ವಿರುದ್ದ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿತ್ತು. ಸರ್ಕಾರಿ‌ ಸಿಎ ಜಾಗಗಳನ್ನ ಲೇಔಟ್ ಮಾಡಿ ಮಾರಾಟ ಮಾಡ್ತಿದ್ದ ಆರೋಪ ಮಾಡಲಾಗಿದೆ. ಇದೀಗ ದೊಡ್ಡಗುಬಿ ಗ್ರಾ ಪಂಚಾಯ್ತಿ ಮರ ಕಡೆದ ಕಾಮಗಾರಿ ಮಾಡಿ ಸರ್ಕಾರಿ ಹಣವನ್ನ ಲೋಟಿ ಮಾಡಿದ್ದ ಆರೋಪ ಕೇಳಿಬಂದಿದೆ.

Edited By : Nagaraj Tulugeri
PublicNext

PublicNext

04/10/2024 09:48 pm

Cinque Terre

16.54 K

Cinque Terre

0