This is a modal window.
Beginning of dialog window. Escape will cancel and close the window.
End of dialog window.
ಹಾವೇರಿ: ಹಾವೇರಿ ಜಿಲ್ಲೆಯಾಗಿ 27 ವರ್ಷಗಳೇ ಕಳೆದಿವೆ. ಜಿಲ್ಲಾ ಕೇಂದ್ರ ಹಾವೇರಿ ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಜಿಲ್ಲಾಡಳಿತ ಕಚೇರಿ ಸೇರಿದಂತೆ ಬಹುತೇಕ ಶಾಲಾ-ಕಾಲೇಜ್‌ಗಳು ನಗರದಿಂದ ಹತ್ತಾರು ಕಿಲೋಮೀಟರ್ ದೂರದಲ್ಲಿವೆ. ಈ ಪ್ರದೇಶಗಳಿಗೆ ತೆರಳಲು ಸಾರ್ವಜನಿಕರಿಗೆ ನಗರ ಸಾರಿಗೆ ವ್ಯವಸ್ಥೆ ಇಲ್ಲ! ದೂರ ದೂರದ ಊರುಗಳಿಂದ ಕೆಲಸ- ಕಾರ್ಯಗಳಿಗಾಗಿ ಆಗಮಿಸುವ ಜನರು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ.
ಕೇಂದ್ರ ಬಸ್ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಹೀಗೆ ನಗರದ ಪ್ರಮುಖ ಸ್ಥಳಗಳಿಗೆ ಸಂಚರಿಸಲು ಸಾರಿಗೆ ವ್ಯವಸ್ಥೆ ಇಲ್ಲ. ಹಾವೇರಿಗೆ ನಗರ ಸಾರಿಗೆ ಬೇಕು ಎಂದು 2013ರಲ್ಲಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ 10ಕ್ಕೂ ಅಧಿಕ ಬಸ್ ನಿಲ್ದಾಣಗಳನ್ನು ನಗರದ ವಿವಿಧೆಡೆ ನಿರ್ಮಿಸಲಾಯಿತು. ಆದರೆ, ಕೆಲವೇ ಕೆಲವು ದಿನಗಳ ಕಾಲ ಓಡಾಡಿದ ನಗರ ಸಾರಿಗೆ ನಂತರ ಕಾರಣಾಂತರಗಳಿಂದ ಬಂದ್ ಆಗಿದ್ದು, ಮತ್ತೆ ಆರಂಭವಾಗಲೇ ಇಲ್ಲ!
ಕೊನೆ ಪಕ್ಷ ಒಂದೆರಡು ಬಸ್‌ಗಳು ಹಾವೇರಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಗಾಂಧಿಪುರ ಕಾಲೇಜ್, ಸುಭಾಸ್ ವೃತ್ತ, ಮುನ್ಸಿಫಲ್ ಮೈದಾನ, ಮೆಡಿಕಲ್ ಕಾಲೇಜ್, ದೇವಗಿರಿ ಜಿಲ್ಲಾಡಳಿತ ಭವನ, ಇಂಜಿನಿಯರಿಂಗ್ ಕಾಲೇಜ್, ವಿಜ್ಞಾನ ಕೇಂದ್ರ, ಸಾರಿಗೆ ಕಚೇರಿ, ಕೆರಿಮತ್ತಿಹಳ್ಳಿ ಹಾವೇರಿ ವಿವಿ, ಉಪಕಾರಾಗೃಹ, ಸಶಸ್ತ್ರ ಮೀಸಲು ಪೊಲೀಸ್ ವಸತಿ ನಿಲಯ ಮಾರ್ಗಗಳಲ್ಲಿ ಸಂಚರಿಸಬೇಕು. ನಗರದಲ್ಲಿ ಸಾರಿಗೆ ಬಸ್ ಸಂಚರಿಸಿದರೆ ಬಡವರು ಖಾಸಗಿ ವಾಹನಗಳಿಗೆ ಅಧಿಕ ಹಣ ತೆರುವುದು ಕಡಿಮೆಯಾಗುತ್ತೆ ಎನ್ನುತ್ತಾರೆ ಸ್ಥಳೀಯರು.
PublicNext
30/09/2024 09:31 am